ಮೂಡುಬಿದಿರೆ : ದೇಶಕ್ಕಾಗಿ ಯಾವುದೇ ಅಪಾರ ಕೊಡುಗೆ ನೀಡದ ಮತ್ತು ಕನ್ನಡಿಗರಿಗೂ ಯಾವುದೇ ರೀತಿಯ ವಿಶಿಷ್ಠ ಕೊಡುಗೆಯನ್ನು ನೀಡದ, ಮುಸ್ಲಿಂ ಸಮುದಾಯದ ಓಟಿನ ಬೇಟೆಗಾಗಿ ವಿವಾದಿತ ವ್ಯಕ್ತಿಯೊಬ್ಬನ ಜಯಂತಿಯನ್ನು ಟಿಪ್ಪು ಜಯಂತಿಯೆಂದು ಸಾರ್ವಜನಿಕರ ಹಣದಿಂದ ಕಾಂಗ್ರೆಸ್ ಸರ್ಕಾರ ಆಚರಿಸಲು ಸಿದ್ಧತೆ ನಡೆಸಿರುವುದಕ್ಕೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾವು ಖಂಡಸಿ, ವಿರೋಧ ವ್ಯಕ್ತಪಡಿಸುತ್ತದೆ ಎಂದು ದ.ಕ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜೋಯ್ಲಸ್ ಡಿ’ಸೋಜಾ ಸುದ್ದಿಗೋಷ್ಠಿ ತಿಳಿಸಿದ್ದಾರೆ.

img_70000000

ಕಳೆದ ವರ್ಷ ಈ ಆಚರಣೆಯಿಂದಾಗಿ ರಾಜ್ಯಾದ್ಯಂತ ಅರಾಜಕತೆ ನಿರ್ಮಾಣವಾಗಿತ್ತು. ಕೊಲೆ, ಸುಲಿಗೆ, ಲಾಠಿ ಚಾರ್ಜ್ ನಡೆದು ಕನ್ನಡಿಗರು ಸಂಕಟ ಪಡುವಂತ್ತಾಗಿತ್ತು. ಜನ ವಿರೋಧಿ ನೀತಿಯನ್ನು ಹೊಂದಿರುವ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುವ ಬದಲು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜಯಂತಿಯನ್ನು ಆಚರಣೆ ಮಾಡಲು ರಾಜ್ಯ ಸರಕಾರ ಯೋಜನೆ ಹಾಕಿಕೊಳ್ಳುತ್ತಿದ್ದರೆ ಬಹುಶ: ರಾಜ್ಯದ ಜನ ಇದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತಿದ್ದರು ಎಂದು ಹೇಳಿದ ಅವರು ಕ್ರೈಸ್ತ ಜನಾಂಗವು ಜನಪ್ರತಿನಿಧಿಗಳ ಮತ್ತು ಸಂಘಸಂಸ್ಥೆಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಜನ ವಿರೋಧಿ ಟಿಪ್ಪು ಜಯಂತಿಯನ್ನು ಆಚರಿಸದಂತೆ ರಾಜ್ಯ ಸರಕಾರದ ಮೇಲೆ ಪ್ರಭಾವ ಬೀರುವಂತೆ ಒತ್ತಾಯಿಸುತ್ತೇನೆಂದು ಜೊಯ್ಲೆಸ್ ತಿಳಿಸಿದರು.

ಅಲ್ಪ ಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಜೋಕಿಂ ಡಿ’ಕೋಸ್ತಾ, ಬಿಜೆಪಿ ಮೂಡುಬಿದಿರೆ ಮಂಡಲದ ಅಧ್ಯಕ್ಷ ವಲೇರಿಯನ್ ಕುಟಿನ್ಹಾ, ಕಾರ್ಯದರ್ಶಿಗಳಾದ ಜಾನ್ಸಿ ಮೆಂಡೋನ್ಸಾ, ಮಹಮ್ಮದ್ ಆರಿಸ್ ಸುದ್ದಿಗೋಷ್ಠಿಯಲ್ಲಿದ್ದರು.

ಗೋದಾನ ಚುನಾವಣಾ ಗಿಮಿಕ್:
ಕಾಂಗ್ರೆಸಿಗರು ಜಿಲ್ಲೆಯ ಆಯ್ದ ಕೆಲವು ಜನರಿಗೆ ಗೋವು ಪೂಜೆಯ ದಿನ ಮೂಡುಬಿದಿರೆಯಲ್ಲಿ ಗೋವುಗಳನ್ನು ನೀಡುತ್ತದೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ, ಓಟಿನ ಗಿಮಿಕ್‍ಗಾಗಿ ಕಾಂಗ್ರೆಸ್ ಜನರನ್ನು ಮರುಳು ಮಾಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಮಾಧ್ಯಮ ವರದಿಗಾರರಲ್ಲಿ ಜೊಯ್ಲೆಸ್ ತಿಳಿಸಿದ್ದಾರೆ. ಗೋವುಗಳ ಬಗ್ಗೆ ಮತ್ತು ಹೈನುಗಾರಿಕೆಯ ಬಗ್ಗೆ ಕಾಳಜಿ ಇದ್ದರೆ ಹೈನುಗಾರಿಕೆಗೆ ಸಬ್ಸಿಡಿ ನೀಡಲಿ. ಹಾಲಿಗೆ ನೀಡಿರುವ ಸಬ್ಸಿಡಿಯನ್ನೇ ಸರ್ಕಾರ ಸರಿಯಾಗಿ ನೀಡುತ್ತಿಲ್ಲ. ಅಲ್ಲದೆ ಈಗಾಗಲೇ ಹಿಂಡಿಗೆ 30-40 ರೂವನ್ನು ಹೆಚ್ಚಿಸಿದೆ. ಕೃಷಿಕರ ಬಗ್ಗೆ ಕಾಳಜಿ ಇದ್ದರೆ ಸರ್ಕಾರ ಸಬ್ಸಿಡಿಯನ್ನು ಘೋಷಿಸಲಿ ಎಂದು ಜೋಯ್ಲಸ್ ಡಿ’ಸೋಜಾ ಸವಾಲು ಹಾಕಿದರು.

By Suddi9

Leave a Reply

Your email address will not be published. Required fields are marked *