ಬಂಟ್ವಾಳ: ಜಾಗತಿಕ ಬಂಟ ಯಕ್ಷಗಾನ ಕಲಾವಿದರ ಒಕ್ಕೂಟದ ಉದ್ಘಾಟನೆ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಅ.22 ರಂದು ಬಿ.ಸಿ.ರೋಡ್ ರಂಗೋಲಿ ಸಭಾಭವನದಲ್ಲಿ ಜರಗಿತು. ಒಡಿಯೂರು ಶ್ರೀ ಗುರುದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಒಕ್ಕೂಟವನ್ನು ಉದ್ಘಾಟಿಸಿದರು.

banta-yakshagana-1

ಬಳಿಕ ಆಶೀರ್ವಚನ ನೀಡಿದ ಶ್ರೀ ಒಡಿಯೂರು ಸ್ವಾಮೀಜಿ ಅವರು ಕಲಾವಿದರು ಸಮಾಜದ ಆಸ್ತಿ. ಕಲಾವಿದರ ಸಂಘಟನೆಯಿಂದ ಕಲಾವಿದರು ಬಲಗೊಂಡು ತಮ್ಮ ಅಭಿವೃದ್ಧಿ ಜೊತೆ ಸಮಾಜದ ಅಭಿವೃದ್ಧಿಗೆ ಕೊಡುಗೆಯಾಗಬೇಕು ಎಂದು ಹೇಳಿದರು.

ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಬಂಟ ಸಮಾಜದ ಕಲಾವಿದರಿಗೆ ಎಲ್ಲಾ ಕಲಾಭಿಮಾನಿಗಳು ಸಹಕಾರ ನೀಡುವಂತಾಗಬೇಕು. ಆಗ ನಿಜಾರ್ಥದಲ್ಲಿ ಕಲಾವಿದರ ಜಾಗತಿಕ ಸಂಘಟನೆಯಾಗುವುದು ಎಂದ ಅವರು ಕಲಾವಿದರಿಗೆ ಅಭಿಮಾನಿಗಳಿಂದ ಸಲ್ಲುವ ಗೌರವ ನಿಜವಾದ ಗೌರವವಾಗಿದೆ ಎಂದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಕಿಶನ್ ಹೆಗ್ಡೆ ಅವರು ಕಟೀಲು 6 ಮೇಳಗಳ ಸಂಚಾಲಕ ದೇವಿ ಪ್ರಸಾದ್ ಶೆಟ್ಟಿ ಅವರೊಡಗೂಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಂಟ ಸಮುದಾಯದ ಯಕ್ಷಗಾನ ಕಲಾವಿದರ ಜಾಗತಿಕ ಸಂಘಟನೆ ಅರ್ಥಪೂರ್ಣವಾಗಿದ್ದು ಕಲಾವಿದರಿಗೆ ಸಹಕಾರಿಯಾಗಬೇಕು ಎಂದು ಹೇಳಿದರು.

ಅಭಿನವ ನಾಗವರ್ಮ ಯಕ್ಷಗಾನ ಛಾಂದಸರು ಬಿರುದಾಂಕಿತ ಡಾ.ಶಿಮಂತೂರು ನಾರಾಯಣ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆಯಿಂದ ಕಲಾವಿದರೊಳಗಿದ್ದ ಕತ್ತಲೆ ಕಳೆದು ಜ್ಞಾನದ ಬೆಳಕು ಮೂಡಿದಂತಾಗಿದೆ. ಹಿರಿಯರನ್ನು ಗುರುತಿಸುವ ಕಿರಿಯರ ಗುಣ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಅರಣ್ಯ ಸಚಿವ ಬಿ.ರಮಾನಾಥ ರೈ, ಒಡ್ಡೂರು ಫಾಮ್ರ್ಸ್ ಪ್ರಗತಿ ಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು, ಬಂಟ್ವಾಳ ಬಂಟರ ಸಂಘ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು, ಸಜೀಪ ಮುನ್ನೂರು ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಬಿ. ಪದ್ಮಶೇಖರ್ ಜೈನ್, ತಾಲೂಕು ಅಕ್ರಮ-ಸಕ್ರಮ ಸಮಿತಿ ಕೆ.ಮಾಯಿಲಪ್ಪ ಸಾಲ್ಯಾನ್,ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ, ದಿ ಟೈಮ್ಸ್ ಗ್ರೂಪ್ ಪ್ರಬಂಧಕ ನವನೀತ್ ಶೆಟ್ಟಿ ಕದ್ರಿ,ಹೊಟೇಲ್ ರಂಗೋಲಿ ಮಾಲಕ ಸದಾನಂದ ಶೆಟ್ಟಿ,ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ,ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಸತೀಶ್ ಶೆಟ್ಟಿ ಪಟ್ಲ,ಬಂಟ್ವಾಳ ಬಂಟರ ಸಂಘದ ಉಪಾಧ್ಯಕ್ಷ ಲೋಕನಾಥ್ ಶೆಟ್ಟಿ ,ಮಂಗಳೂರು ವಿಧಾನ ಸಭಾ ಕ್ಷೇತ್ರ ಬಿ.ಜೆ.ಪಿ.ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಉದ್ಯಮಿ ಅರಳ ಸುಬ್ಬಯ್ಯ ಶೆಟ್ಟಿ ಬಾರ್ಲಗುತ್ತು,ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಕಳ ಘಟಕದ

ಅಧ್ಯಕ್ಷ ಗೋಪಾಲ ಶೆಟ್ಟಿ ಕಾರ್ಕಳ,ಪುಣೆ ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಕೋಶಾ„ಕಾರಿ ಗಣೇಶ ಶೆಟ್ಟಿ ಸಾಣೂರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಅವರಿಗೆ ಯಕ್ಷ ಗೌರವನಿಧಿ ಸಮರ್ಪಿಸಲಾಯಿತು. ಒಕ್ಕೂಟ ಗೌರವಾಧ್ಯಕ್ಷ ಸತ್ಯಪಾಲ ರೈ ಕಡೆಂಜ ಅವರು ಸ್ವಾಗತಿಸಿದರು.ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಪ್ರಸ್ತಾವನೆಗೈದರು. ಪ್ರಧಾನಕಾರ್ಯದರ್ಶಿ ರಾಕೇಶ್ ರೈ ಅಡ್ಕ ಅವರು ವಂದಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *