ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರ49ನೆ ವರ್ಷದ ಪಟ್ಟಾಭಿಷೇಕ ದಿನಾಚರಣೆ ಸೋಮವಾರ ನಡೆಯಲಿದ್ದು ನವ ವಧುವಿನಂತೆಧರ್ಮಸ್ಥಳವು ಹೂವು ತಳಿರು–ತೋರಣ ಮೊದಲಾದ ಪ್ರಾಕೃತಿಕ ಪರಿಕರಗಳಿಂದ ಅಲಂಕೃತಗೊಂಡಿದ್ದು ಕಣ್ಮನ ಸೆಳೆಯುತ್ತಿದೆ.

01111

ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ), ಬಸದಿ, ಅಮೃತವರ್ಷಿಣಿ ಸಭಾ ಭವನ, ವಸತಿ ಛತ್ರಗಳು ಸರ್ವಾಲಂಕೃತಗೊಂಡಿದ್ದು ಎಲ್ಲೆಲ್ಲೂ ಸೊಬಗಿದೆ, ಸೊಗಡಿದೆ. ಸೋಮವಾರ ಶ್ರೀ ಮಂಜುನಾಥ ಸ್ವಾಮಿ ಅ.24ರಂದು ದೇವಸ್ಥಾನದಲ್ಲಿ, ಭಗವಾನ್‍ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆ ನಡೆಯಲಿದೆ.

09999

ಗ್ರಾಮಾಭಿವೃದ್ಧಿಯೋಜನೆ, ಉಚಿತ ಸಾಮೂಹಿಕ ವಿವಾಹ, ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗತರಬೇತಿಕೇಂದ್ರ, ಆಯುರ್ವೇದ, ಪ್ರಕೃತಿಚಿಕಿತ್ಸೆ ಮತ್ತುಯೋಗ ವಿಜ್ಞಾನಕ್ಕೆ ಪ್ರೋತ್ಸಾಹ, ಕಲ್ಯಾಣ ಮಂಟಪಗಳು, ಶಾಂತಿವನಟ್ರಸ್ಟ್ ಮೂಲಕ ಶಾಲೆಗಳಲ್ಲಿಯೋಗ ಮತ್ತು ನೈತಿಕಶಿಕ್ಷಣಯೋಜನೆಅನುಸ್ಠಾನ, ಧರ್ಮೋತ್ಥಾನಟ್ರಸ್ಟ್ ಮೂಲಕಐತಿಹಾಸಿಕದೇವಸ್ಥಾನಗಳು ಮತ್ತು ಸ್ಮಾರಕಗಳಜೀರ್ಣೋದ್ಧಾರ ಮತ್ತು ಸಂರಕ್ಷಣೆಇತ್ಯಾದಿ ಹತ್ತು – ಹಲವುಯೋಜನೆಗಳನ್ನು ಹೆಗ್ಗಡೆಯವರು ಲೋಕಕಲ್ಯಾಣಕ್ಕಾಗಿಅನುಷ್ಠಾನಗೊಳಿಸಿದ್ದಾರೆ. ಧರ್ಮಸ್ಥಳದಇತಿಹಾಸದಲ್ಲಿಇವರಆಡಳಿತಾವಧಿ ಸುವರ್ಣಯುಗಎಂದೇ ಹೇಳಬಹುದು.

033333

ಸರಳ ಸಮಾರಂಭ: ಧರ್ಮಸ್ಥಳ ಹಾಗೂಅದರಆಶ್ರಯದಲ್ಲಿ ನಡೆಸಲ್ಪಡುವ ವಿವಿಧ ಸಂಸ್ಥೆಗಳ ನೌಕರರು, ಭಕ್ತರು, ಅಭಿಮಾನಿಗಳು, ಊರ-ಪರವೂರ ನಾಗರಿಕರು ಹೆಗ್ಗಡೆಯವರಿಗೆ ಫಲ-ಪುಷ್ಪವನ್ನು ಭಕ್ತಿಯಿಂದ ಸಮರ್ಪಿಸುತ್ತಾರೆ. ಸಂಜೆ ನಾಲ್ಕುಗಂಟೆಗೆಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ವಿವಿಧ ಸಂಸ್ಥೆಗಳ ವರದಿಯನ್ನು ಸಾದರಪಡಿಸಲಾಗುತ್ತದೆ.ಶಾಲಾ-ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನುಅಭಿನಂದಿಸಲಾಗುತ್ತದೆ. ಹಿರಿಯ ನೌಕರರನ್ನು ಹೆಗ್ಗಡೆಯವರು ಸನ್ಮಾನಿಸುವರು. ಮುಂದಿನ ಹೊಸಯೋಜನೆಗಳನ್ನುಕೂಡಾ ಹೆಗ್ಗಡೆಯವರು ಪ್ರಕಟಿಸುತ್ತಾರೆ.

055555

ಅಭಿನಂದನಾ ಸಮಾರಂಭ: “ಇಂಡಿಯಾಟುಡೆ” ಇಂಗ್ಲೀಷ್ ಪತ್ರಿಕೆರಾಷ್ಟ್ರಮಟ್ಟದಲ್ಲಿ ನಡೆಸಿದ ಸಮೀಕ್ಷೆಯಂತೆ ಧರ್ಮಸ್ಥಳವು ರಾಷ್ಟ್ರಮಟ್ಟದಲ್ಲಿ ಅತೀ ಸ್ವಚ್ಛ ಧಾರ್ಮಿಕ ಕ್ಷೇತ್ರ ಎಂದು ಗುರುತಿಸಲ್ಪಟ್ಟಿದೆ. ಸಂಜೆ ನಾಲ್ಕು ಗಂಟೆಗೆ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮಾನ್ಯ ಮುಜರಾಯಿ ಸಚಿವರುದ್ರಪ್ಪ ಮಾನಪ್ಪ ಲಮಾಣಿ ಹೆಗ್ಗಡೆಯವರನ್ನುಅಭಿನಂದಿಸಿ ಶುಭ ಹಾರೈಸುವರು. ರಾಜ್ಯ ಸಭಾ ಸದಸ್ಯ ಬೆಳಗಾವಿಯಡಾ. ಪ್ರಭಾಕರ್‍ಕೋರೆ ಮುಖ್ಯಅತಿಥಿಯಾಗಿ ಭಾಗವಹಿಸುವರು.ಶಾಸಕ ಕೆ.ವಸಂತ ಬಂಗೇರಅಧ್ಯಕ್ಷತೆ ವಹಿಸುವರು.

133333

ಧರ್ಮಸ್ಥಳ: ಛದ್ಮವೇಶ ಸ್ಪರ್ಧೆಯಲ್ಲಿಗ್ರಾಮೀಣ ಸಂಸ್ಕೃತಿ, ಪರಂಪರೆಯ ಸೊಗಡಿನ ವಿಶ್ವರೂಪದರ್ಶನ. ತುಳುನಾಡಿನ ಭೂತಾರಾಧನೆ, ಬೇಸಾಯ, ಪೈರಿನಕಟಾವು ಅವಿಭಕ್ತಕುಟುಂಬ ಜೀವನ ಪದ್ಧತಿ, ಸರದಿ ಸಾಲಿನಲ್ಲಿ ಹೋಗಿದೇವರದರ್ಶನ ಮಾಡುವುದು, ಮದ್ಯಪಾನದೂರ ಮಾಡುವುದು, ಹತ್ತು-ಹಲವುಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಶನಿವಾರ  ಧರ್ಮಸ್ಥಳದಲ್ಲಿ ದೇವಳ ನೌಕರರು ಸಾದರಪಡಿಸಿದರು. ಕುದುರೆ ಸವಾರಿ, ಭೀಕರಕಾದಾಟದಯುದ್ಧ, ಬಳಿಕ ಶಾಂತಿಯ ಸಂದೇಶ ಮನೋಜ್ಞವಾಗಿತ್ತು. ವಿಶ್ವದಲ್ಲೇ ಅತ್ಯಂತ ಎತ್ತರವಾದ ಚೀನಾದಲ್ಲಿರುವ ಬುದ್ಧನ ಮೂರ್ತಿ, ರಷ್ಯಾದ ಮದರ್ ಲ್ಯಾಂಡ್‍ಕಾಲ್ಸ್, ಅಮೇರಿಕಾ ವಿಮೋಚನೆಯ ಮೂರ್ತಿ, ಬ್ರೆಜಿಲ್‍ ದೇಶದ ಏಸುಕ್ರಿಸ್ತನ ಮೂರ್ತಿಗಳ ಪಾವನ ದರ್ಶನವೂ ಪ್ರೇಕ್ಷಕರಿಗಾಯಿತು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ49ನೇ ವರ್ಷದ ಪಟ್ಟಾಭಿಷೇಕ ದಿನಾಚರಣೆ ಸೋಮವಾರ ನಡೆಯಲಿದ್ದುಅದಕ್ಕೆ ಪೂರ್ವಭಾವಿಯಾಗಿ ಶನಿವಾರಅಮೃತವರ್ಷಿಣಿ ಸಭಾಭವನದಲ್ಲಿದೇವಳ ನೌಕರರಿಗಾಗಿಛದ್ಮವೇಶ ಸ್ಪರ್ಧೆಆಯೋಜಿಸಲಾಗಿತ್ತು. ಸದಾತಮ್ಮಕರ್ತವ್ಯದಲ್ಲಿ ವ್ಯಸ್ತರಾಗಿರುವ ನೌಕರರು ಸಂತಸ-ಸಂಭ್ರಮದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು.

144444

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಸಹೋದರ ಡಿ. ಹರ್ಷೆಂದ್ರಕುಮಾರ್‍ ಛದ್ಮವೇಶ ಸ್ಪರ್ಧೆ ವೀಕ್ಷಿಸುವುದರೊಂದಿಗೆ ತಮ್ಮ ಕ್ಯಾಮರಾಗಳಲ್ಲಿ ಫೋಟೊ ಕ್ಲಿಕ್ಕಿಸಿ, ನೌಕರರ ಸಂತಸವನ್ನುಇಮ್ಮಡಿಗೊಳಿಸಿದರು. ಚಪ್ಪಾಳೆತಟ್ಟಿ ಸ್ಪರ್ಧಿಗಳನ್ನು ಹುರಿದುಂಬಿಸಿದರು. ಪ್ರೊ. ಎಸ್. ಪ್ರಭಾಕರ್, ಹೇಮಾವತಿ ವಿ. ಹೆಗ್ಗಡೆ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್‍ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *