ಬಂಟ್ವಾಳ : ಬಂಟ್ವಾಳ ತಾಲೂಕಿನ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನಸಭೆ ಮತ್ತು ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳ ವಿಧಾನಸಭೆ ಆಶ್ರಯದಲ್ಲಿ ನೂತನ ಕಾರ್ಯಕಾರಿ ಮಂಡಳಿ ಪದಗ್ರಹಣ ಹಾಗೂ ಕುಲಾಲ ಕುಂಬಾರರ ಯುವ ಸಮ್ಮಿಲನ 2016ವು ಅಕ್ಟೋಬರ್ 23ರಂದು ಮಧ್ಯಾಹ್ನ ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿದೆ.

18ya-kumbara

ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಸಂಸ್ಥಾಪಕರಾದ ಡಾ| ಅಣ್ಣಯ್ಯ ಕುಲಾಲ್ ಉಳ್ತೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಬಂಟ್ವಾಳದ ನೂತನ ಅಧ್ಯಕ್ಷರಾಧ ನಾರಾಯಣ. ಸಿ. ಪೆರ್ನೆ ಅಧ್ಯಕ್ಷತೆ ವಹಿಸಲಿದ್ದಾರೆ.

ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ರಾಜ್ಯಾಧ್ಯಕ್ಷರಾದ ತೇಜಸ್ವಿರಾಜ್, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ವಿಭಾಗೀಯ ಅಧ್ಯಕ್ಷರಾದ ಮೋಹಿತ್ ಕುಲಾಲ್ ಕದ್ರಿ ಕಂಬಳ, ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಜಯೇಶ್‍ಗೋವಿಂದ್, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ ಕರಾವಳಿ ವಿಭಾಗ ವಿಭಾಗೀಯ ಕಾರ್ಯಾಧ್ಯಕ್ಷರಾದ ಅಶೋಕ್ ಕುಲಾಲ್ ಕೂಳೂರು, ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಸತೀಶ್ ಕುಲಾಲ್, ಕರ್ನಾಟಕ ರಾಜ್ಯ ಕುಂಬಾರರ ಮಹಿಳಾ ಸಂಘ (ರಿ.)ದ ರಾಜ್ಯ ಉಪಾಧ್ಯಕ್ಷೆ ಅಧ್ಯಕ್ಷೆ ಯಶೋಧ ಬಿ., ಬಂಟ್ವಾಳ ಉಪವಿಭಾಗ ಅಬಕಾರಿ ಉಪನಿರೀಕ್ಷಕರಾದ ಕು| ಸುಜಾತ, ಸಿವಿಲ್ ಇಂಜಿನಿಯರ್ ಪ್ರಕಾಶ್‍ರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಹಾಗೂ ಅದೇ ದಿನ ಸ್ವಜಾತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಕ್ವಿಝ್ ನಡೆಯಲಿರುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *