ಮೂಡುಬಿದಿರೆ: ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಬುಧವಾರ ಪ್ರಾರಂಭವಾಯಿತು.

mbd_oct13_2-2-1

ಶಾಸಕ, ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಅವರು ಕುಂಡದಲ್ಲಿ ತೆಂಗಿನ ಸಸಿಗೆ ನೀರೆರೆದು ಶಿಬಿರವನ್ನು ಉದ್ಘಾಟಿಸಿ, ಎನ್ನೆಸೆಸ್‍ಗಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚುವರಿಯಾಗಿ ರೂ. 2 ಕೋಟಿಯನ್ನು ಒದಗಿಸಿದ್ದಾರೆ ಳಿಎಂದು ಹೇದರು. `ವೃತ್ತಿಯಲ್ಲಿನ ಪ್ರಾಮಾಣಿಕತೆಯ ಮೂಲಕ ವೈಯಕ್ತಿಕವಾಗಿ, ಗುಣಮಟ್ಟದ ಉತ್ಪಾದನೆಯ ಮೂಲಕ ದೇಶದ ಆರ್ಥಿಕತೆಯನ್ನು ವೃದ್ಧಿಸುವ ಛಲ ನಮ್ಮ ಯುವಜನರಲ್ಲಿರಬೇಕಾಗಿದೆ’ ಎಂದು ಅವರು ಕರೆ ನೀಡಿದರು.

mbd_oct13_2-1-1

ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ. ರಮೇಶ್ ಭಟ್ ಅಧ್ಯಕ್ಷತೆ ವಹಿಸಿ, ಶ್ರೀ ಮಹಾವೀರ ಕಾಲೇಜಿನಲ್ಲಿ 1969ರಲ್ಲಿ ಪ್ರಾರಂಭವಾಗಿದ್ದ ಎನ್ನೆಸೆಸ್ ಘಟಕದ ಮೊದಲ ವರ್ಷದ ಸದಸ್ಯರಾಗಿ ಗಳಿಸಿದ್ದ ಅನುಭವವನ್ನು ಸಾಂದರ್ಭಿಕವಾಗಿ ತಿಳಿಸಿ, ಮಾನವ ಶ್ರಮಕ್ಕೂ ಮಿಗಿಲಾದ ವ್ಯಕ್ತಿತ್ವ ರೂಪಣೆಗೆ ಸಹಾಯಕವಾಗುವ ವಿವಿಧ ಚಟುವಟಿಕೆಗಳು ಈಗಿನ ಎನ್ನೆಸೆಸ್‍ನಲ್ಲಿರುವುದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆನೀಡಿದರು.

ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಎಚ್.ಸಿ. ದೀಕ್ಷಿತ್, ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ ಧನಂಜಯ ಮೂಡಬಿದಿರೆ ಮಾತನಾಡಿ ಶಿಬಿರಕ್ಕೆ ಶುಭ ಹಾರೈಸಿದರು,

ಮುಖ್ಯ ಅತಿಥಿಯಾಗಿ ಪುರಸಭಾಧ್ಯಕ್ಷೆ ರೂಪಾ ಎಸ್. ಶೆಟ್ಟಿ, ಕ್ಷೇತ್ರ ಶಿಕ್ಷಣಾ„ಕಾರಿ, ಪ್ರಾಂತ್ಯ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಬಿ. ರಾಜಶ್ರೀ, ಎಸ್‍ಡಿಎಂಸಿ ಕಾರ್ಯಾಧ್ಯಕ್ಷ ಎಚ್. ಸುರೇಶ್ ಪ್ರಭು, ಗುತ್ತಿಗೆದಾರ ಗಿರೀಶ್, ಉದ್ಯಮಿ ವಾಸುದೇವ ನಾಯಕ್, ಅಸ್ಮಲ್ ಪ್ರಾಂತ್ಯ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹರೀಶ್ ಭಾಗವಹಿಸಿದ್ದರು. ಶಿಬಿರಾಧಿಕಾರಿ, ಘಟಕದ ಕಾರ್ಯಕ್ರಮಾಧಿಕಾರಿ ಗೀತಾ ರಾಮಕೃಷ್ಣ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಪ್ರಸಾದ್ ವಂದಿಸಿದರು. ಕಾರ್ಯದರ್ಶಿ ಪ್ರಮೀಳಾ ಉಪಸ್ಥಿತರಿದ್ದರು. ಸಹಶಿಬಿರಾಧಿಕಾರಿ ವಿಜಯಲಕ್ಷ್ಮೀ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *