ಬಜಪೆ:ಡಾ. ಶಿವರಾಮ ಕಾರಂತರ ನೆನಪಿನಲ್ಲಿ ಕೋಟದ ಮಿತ್ರಮಂಡಳಿ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜ್‍ನಲ್ಲಿ ಅ. 10ರಂದು ಅಯೊಜಿಸಿರುವ 20ನೇ ವರ್ಷದ ವಿದ್ಯಾರ್ಥಿನಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಳದ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಅನುಜ್ಞಾ ಭಟ್ ಆಯ್ಕಯಾಗಿದ್ದಾರೆ. ಎಂದು ಮಿತ್ರ ಮಂಡಳಿಯ ಅಧ್ಷಕ್ಷ ಉಪೇಂದ್ರ ಸೋಮಾಯಾಜಿ ಮತ್ತು ಸಮ್ಮೇಳನದ ಪ್ರದಾನ ಸಂಚಾಲಕ ಶೇಖರ ಅಜೆಕಾರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
9-vm-anujna-bhat
ಈಕೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಮಕ್ಕಳ ಮೇಳದ ಕಲಾವಿದೆಯಾಗಿ, ಭರತನಾಟ್ಯ, ಫಿಲ್ಮ್‍ನೃತ್ಯ, ಸಂಗೀತ, ಕ್ರೀಡೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭೆ. ಕಲಿಕೆಯಲ್ಲೂ ಮುಂದು. ಹೋಬಲಿ ಮತ್ತು ತಾಲೂಕು ಕ್ರೀಡಾಕೂಟಗಲ್ಲಿ ಆರು ಬಾರಿ ವಯಕ್ತಿಕ ಚಾಂಪಿಯನ್ ಶಿಪ್ ಗಳಿಸಿದವರು. ಅಲ್ಲದೆ ಕವಿತೆ ಪ್ರಬಂಧ ಕತೆಗಳನ್ನು ಬರೆದಿರುವ ಅವರು ಬರಹ ಮತ್ತು ಮಾತುಗಾರಿಕೆಯಲ್ಲಿ ಸಫಲರಾಗಿದ್ದಾರೆ. ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿಭಾರತ್ನ, ಯಕ್ಷ ಸಭಾಕದ್ರಿ, ಕಿನ್ನಿಗೋಳಿ ರೋಟರಿ, ವಿಜಯ ಯುವ ಸಂಘದ ಗೌರವ ಅಂಬಾ ಪ್ರತಿಸ್ಠಾನ, ದ.ಕ ಜಿಲ್ಲಾಶಿಕ್ಷಕ ಸಂಘದ ಗೌರವ, ಕನ್ನಡ ಪ್ರಾಧಿಕಾರ ಗೌರವ ಸಹಿತ ಹಲವು ಪುರಸ್ಕಾರಗಳು ಅನುಜ್ಞಾಳಿಗೆ ಲಭಿಸಿವೆ.

By Suddi9

Leave a Reply

Your email address will not be published. Required fields are marked *