ಸುದ್ದಿ9 ಬಂಟ್ವಾಳ: ಸಂಗಬೆಟ್ಟು ಗ್ರಾಮ ಪಂಚಾಯತ್ನಲ್ಲಿ ಕಳೆದ 2 ವರ್ಷಗಳಲ್ಲಿ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳು ಕಟ್ಟಿದ ಮನೆಗಳಿಗೆ ರಾಜೀವ ಗಾಂಧಿ ನಿಗಮವು ಕೆಲವೊಂದು ಕಾರಣ ನೀಡಿ ಹಣ ಬಿಡುಗಡೆಯಾಗದಿರುವುದರಿಂದ ಫಲಾನುಭವಿಗಳು ಕಂಗಾಲಾಗಿದ್ದು. ಈಗಾಗಲೇ ನಿಮರ್ಿಸಿದ ಮನೆಗಳಿಗೆ ನಿಯಮ ಸಡಿಲಿಸಿ ಹಣ ಬಿಡುಗಡೆ ಮಾಡಬೇಕೆಂದು ಸಂಗಬೆಟ್ಟು ಗ್ರಾಮ ಪಂಚಾಯತ್ನ 2014-15ನೇ ಸಾಲಿನ ಗ್ರಾಮ ಸಭೆಯಲ್ಲಿ ನಿಗಮಕ್ಕೆ ಒತ್ತಾಯ ಮಾಡಲು ತೀಮರ್ಾನಿಸಲಾಯಿತು.
ಮುಂದಕ್ಕೆ ವಸತಿ ಸೌಲಭ್ಯ ಮಂಜೂರಾದ ಫಲಾನುಭವಿಗಳು ಯಾವುದೇ ಕಾರಣಕ್ಕೂ ಕಟ್ಟಿರುವ ಮನೆಗಳು 700 ಚದರ ಅಡಿ ದಾಟಬಾರದು. ನಿಯಮ ಮೀರಿ ಮನೆ ನಿಮರ್ಿಸಿದರೆ ಹಣ ಬಿಡುಗಡೆಗೆ ಅಸಾಧ್ಯ ಎಂದು ಕಾರ್ಯನಿವರ್ಾಹಕ ಅಧಿಕಾರಿಯವರು ತಿಳಿಸಿದರು. ಸಭೆಯಲ್ಲಿ ಅನಧಿಕೃತ ಗೂಡಂಗಡಿ ತೆರವು, ರಸ್ತೆ ಬದಿ ಮರ ಕಡಿದ ವಿಚಾರ, ಸಿದ್ಧಕಟ್ಟೆ-ಕಪರ್ೆ ರಸ್ತೆ ಹದಗೆಟ್ಟ ಬಗ್ಗೆ, ರಿಕ್ಷಾ ಪಾಕರ್ಿಂಗ್ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಗ್ರಾಮಸ್ಥರು ಬೇಡಿಕೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ವಹಿಸಿದ್ದರು. ಗ್ರಾಮ ಸಭೆಯ ಅನುಷ್ಟಾನ ಅಧಿಕಾರಿಯಾಗಿ ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಸಿಪ್ರಿಯನ್ ಮಿರಾಂದ, ಜಿ.ಪಂ. ಸದಸ್ಯೆ ನಳಿನಿ ಬಿ.ಶೆಟ್ಟಿ, ತಾ.ಪಂ.ಸದಸ್ಯೆ ರೇವತಿ ಆರ್.ಪೂಜಾರಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು, ಸದಸ್ಯರಾದ ಉಮ್ಮರ್ ಫಾರೂಕ್, ಶ್ರೀಧರ ಎಸ್.ಪಿ, ಸತೀಶ್ ಪೂಜಾರಿ, ಮಾಧವ ಶೆಟ್ಟಿಗಾರ್, ದೇವಪ್ಪ ಕಕರ್ೇರಾ, ಬೆನೆಡಿಕ್ಟಾ ಡಿ`ಕೋಸ್ತ, ಗುಲಾಬಿ ಆರ್.ಪೂಜಾರಿ, ಮಲ್ಲಿಕಾ ಯು.ನಾಯ್ಕ್, ವಸಂತಿ, ವಾಣಿ, ಶ್ರೀದೇವಿ ವಿ.ಪ್ರಭು, ಎಪಿಎಂಸಿ ಸದಸ್ಯರಾದ ರತ್ನಕುಮಾರ್ ಚೌಟ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮನಾಭ ವಿ.ಸಾಲ್ಯಾನ್ ಸ್ವಾಗತಿಸಿ ಧನ್ಯವಾದವಿತ್ತರು

