ಉಳ್ಳಾಲ: ಸ್ವಚ್ಛತೆ ಎಂಬ ವಿಚಾರದಲ್ಲಿ ಯಾವುದೇ ಜಾತಿ ಧರ್ಮ ಎಂಬ ಭೇದವಿಲ್ಲ ಜಗತ್ತಿನ ಎಲ್ಲಾ ಜನರಿಗೆ ಸ್ವಚ್ಛತೆ ಕಪಾಡುವ ಅಗತ್ಯವಿದೆ ಎಂದು ಕೃಷೀಕ ಸಮಾಜದ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಅಭಿಪ್ರಾಯಪಟ್ಟರು.
ಅವರು ಜನನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ 12ನೇ ವಾರ್ಡ್ ನಾಗರಿಕ ಸಮಿತಿ ಸಹಯೋಗದೊಂದಿಗೆ ಭಾನುವಾರ ಗಾಂಧಿ ಜಯಂತಿಯ ಪ್ರಯುಕ್ತ ದೇರಳಕಟ್ಟೆ ಜಲಾಲ್ಬಾಗ್ ಪರಿಸರದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾವು ಮೊದಲು ನಮ್ಮ ಮನಸ್ಸು ಶುದ್ಧಿಕರಣಗೊಳಿಸುವ ಮೂಲಕ ನಮ್ಮ ಗ್ರಾಮದಿಂದ ಹಿಡಿದು ನಮ್ಮ ದೇಶದವರೆಗೆ ಸ್ವಚ್ಛತೆಯನ್ನು ಕಪಾಡಬಹುವುದು ಎಂದು ಹೇಳಿದರು.

ಕಣಚೂರು ಸಮೂಹ ಸಂಸ್ಥೆಯ ನಿರ್ದೇಶಕ ಅಬ್ದುರ್ರಹ್ಮಾನ್ ಮಾತನಾಡಿ, ನಮ್ಮ ದೇಶವನ್ನು ನೋಡಲು ದೇಶ ವಿದೇಶದಿಂದ ಭಾರತಕ್ಕೆ ಬರುತ್ತಾರೆ. ನಮ್ಮ ದೇಶ ಸ್ವಚ್ಛತೆ ಕಪಾಡದೆ ಇದ್ದಲ್ಲಿ ಭಾರತ ದೇಶದ ಕುರಿತು ವಿದೇಶಕ್ಕೆ ಕೆಟ್ಟ ಸಂದೇಶ ಹೋಗುತ್ತಾದೆ. ವಿಶೇಷವಾಗಿ ಈ ದೇರಳಕಟ್ಟೆ ಎಂಬ ಪ್ರದೇಶದಲ್ಲಿ ನಾಲ್ಕು ಮೆಡಿಕಲ್ ಕಾಲೇಜು ಮತ್ತು ಅಸ್ಪತ್ರೆಗಳು ಕಾರ್ಯಚರಿಸುತ್ತಿದ್ದು ಈ ಭಾಗಕ್ಕೆ ದೇಶ ವಿದೇಶದಿಂದ ಹೆಚ್ಚಿನ ಜನಸಂಖ್ಯೆ ಅಗಮಿಸುತ್ತಿದ್ದು ಮೊದಲು ನಮ್ಮ ಪರಿಸರವನ್ನು ಸ್ವಚ್ಚತೆಯಿಂದ ಕಪಾಡುವ ಎಂದು ಹೇಳಿದರು.

ವಿದ್ಯಾರತ್ನ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೋಟ್ಟು ಮಾತನಾಡಿ, ಮೊದಲು ನಮ್ಮ ಮನ ನಂತರ ನಮ್ಮ ಮನೆ ನಂತರ ನಮ್ಮ ಪರಿಸರವನ್ನು ಕಪಾಡಿದಾಗ ಸುಂದರವಾದ ಮತ್ತು ಅರೋಗ್ಯ ಪೂರ್ಣ ಸಮಾಜ ನಿಮಾರ್ಣಮಾಡಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ಹೇಳಿದರು.

ಜನನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಚಾರಿಟೇಬಲ್ ಟ್ರಸ್ಟ್ನ ಪ್ರ.ಕಾರ್ಯದರ್ಶಿ ಸುಮತಿ ಹೆಗ್ಡೆ, ಕೋಶಾಧಿಕಾರಿ ಜ್ಯಾನೆಟ್ ಡಿ’ಸೋಜಾ, ಜಿಲ್ಲಾ ಕೆ.ಡಿ.ಪಿ ಸದಸ್ಯ ಅಲ್ವಿನ್ ಡಿ’ಸೋಜಾ, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರಾದ ಡಿ.ಎಂ ಮೊಹಮ್ಮದ್, ಲ್ಯಾನ್ಸಿ ಡಿ’ಸೋಜಾ, ಉದ್ಯಮಿ ಮಜೀದ್ ಗೋಲ್ಡ್ ಹೌಸ್, ಮದರಂಗಿ ಮಾಸಿಕದ ಪ್ರಕಾಶಕ ಡಿ.ಐ ಅಬೂಬಕ್ಕರ್ ಕೈರಂಗಳ, ಜಲಾಲ್ಬಾಗ್ ನಾಗರಿಕ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಉಪಾಧ್ಯಕ್ಷ ಅಬೂ, ಕಾರ್ಯದರ್ಶಿ ಹಮೀದ್, ಸದಸ್ಯರಾದ ಅಮೀರ್ ಹುಸೈನ್, ಇಸ್ಮಾಯಿಲ್, ಸಮಾಜ ಸೇವಕ ಅಮೀರ್ ತುಂಬೆ ಈ ಸಂದರ್ಭ ಉಪಸ್ಥಿತರಿದರು.
ಜನನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷೆ ಗೀತಾ ಕೆ. ಉಚ್ಚಿಲ್ ಸ್ವಾಗತಿಸಿ, ಉಚ್ಚಿಲ್, ಉಪಾಧ್ಯಕ್ಷೆ ಶರ್ಮಿಳ ದಿಲೀಪ್ ವಂದಿಸಿದರು.

