ಬಂಟ್ವಾಳ; ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಸರ್ವಧರ್ಮ ಪ್ರಾರ್ಥನೆಯೊಂದಿಗೆ ವಿಶಿಷ್ಟರೀತಿಯಲ್ಲಿ ಆಚರಿಸಲಾಯಿತು. ಸರಸ್ವತಿ ಸ್ತ್ರೋತ್ರ, ಗುರುವಂದನೆ, ಧರ್ಮಗ್ರಂಥಗಳ ಪಠಣ, ಭಘವದ್ಗೀತೆ, ಬೈಬಲ್, ಕುರಾನ್ ಪಠಣ, ಜೈನ್ ಪಠಣ, ಜಯಬೋಲೋ ಹಾಡು ರಘುಪತಿ ರಾಘವ ರಾಜಾರಾಮ್, ಶಾಂತಿಮಂತ್ರ, ಕೊನೆಯಲ್ಲಿ ಮೌನಪ್ರಾರ್ಥನೆಯನ್ನು ಆಯೋಜಿಸಲಾಗಿತ್ತು.

???????????????????????????????

???????????????????????????????

ಇದೇ ವೇಳೆ ಗಾಂಧಿಜಯಂತಿಯ ಆದರ್ಶಜೀವನದ ಕುರಿತಾಗಿ ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ ಮಾತನಾಡಿದರು. ಈ ನೆಲದಲ್ಲಿ ಗಾಂಧೀಜಿ ಹುಟ್ಟಿದ್ದಾರೆ, ಬೆಳೆದಿದ್ದಾರೆ, ನಡೆದಾಡಿರುವುದು ನಮ್ಮ ಪಾಲಿನ ಪುಣ್ಯ, ತಾನು ಅನುಸರಿಸಿ ಮತ್ತೊಬ್ಬರಿಗೆ ಉಪದೇಶಿಸುವ ಆದರ್ಶವನ್ನು ಬೆಳೆಸಿಕೊಂಡಿದ್ದ ಗಾಂಧೀಜಿಯವರು, ಸತ್ಯ, ಅಹಿಂಸೆ, ನ್ಯಾಯ, ಸ್ವಚ್ಛತೆಯ ಸಂದೇಶವನ್ನು ಜಗತ್ತಿನೆಲ್ಲಡೆ ಸಾರಿದ ಮಹಾನ್ ಶಕ್ತಿ ಎಂದ ಅವರು, ಗಾಂಧೀಜಿಯ ಆದರ್ಶವನ್ನು ಪಾಲಿಸುವ ಮೂಲಕ ದೇಶದ ಗೌರವ ಹೆಚ್ಚಿಸೋಣ ಎಂದರು.

???????????????????????????????
???????????????????????????????

ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ವಿ.ಶೆಟ್ಟಿ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಗ್ರೇಸ್ ಪಿ ಸಲ್ದಾನ, ಸ್ಕೌಟ್ ಮಾಸ್ಟರ್ ರಾಮಚಂದ್ರ, ಗೈಡ್ ಕ್ಯಾಪ್ಟನ್ ಗಳಾದ ಅಕ್ಷತಾ, ಅನಿತಾ.ಜಿ., ಬುಲ್ಬುಲ್ ಫ್ಲಾಕ್ ಲೀಡರ್ ಯಶೋದಾ, ಕಬ್ ಮಾಸ್ಟರ್ ಹರಿಣಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *