ಮೂಡುಬಿದಿರೆ: ಗಾಂಧಿ ಜಯಂತಿಯ ಪ್ರಯುಕ್ತ ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಸರ್ವಧರ್ಮ ಅರಿವು ಶಿಬಿರವನ್ನು ಆಚರಿಸಲಾಯಿತು. ಶ್ರೀಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶಿಬಿರವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ, ಆಧ್ಯಾತ್ಮ ಸಂಪತ್ತೇ ನಿಜವಾದ ಸಂಪತ್ತು. ಅದರ ವಿಸ್ತಾರವನ್ನು, ಆಳವನ್ನು ನಾವು ಅರಿಯಬೇಕು. ಸಕಲ ಜೀವರಾಶಿಗಳಲ್ಲಿ ಪರಮಾತ್ಮನನ್ನು ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಧರ್ಮಗಳು ನಮ್ಮಲ್ಲಿ ವಿವೇಕವನ್ನು ಮೂಡಿಸಬೇಕು. ಅಂಥಹ ವಿವೇಕವನ್ನು ಇಂಥಹ ಶಿಬಿರಗಳು ವಿದ್ಯಾರ್ಥಿಗಳಿಗೆ ನೀಡುವಂತಾಗಲಿ ಎಂದು ಹಾರೈಸಿದರು.mbd_oct2_5

ನಿವೃತ್ತ ಮುಖ್ಯ ವಲೇರಿಯನ್ ಮೋರಾಸ್ ಕ್ರೈಸ್ತ ಧರ್ಮದ ತತ್ತ್ವ ಸಾರಗಳನ್ನು , ಹಿಂದೂ ಧರ್ಮದ ಬಗ್ಗೆ ಉಜಿರೆ ಶ್ರೀ ಧ.ಮಂ. ಕಾಲೇಜಿನ ಉಪನ್ಯಾಸಕ ಡಾ.ಶ್ರೀಧರ ಭಟ್ ಹಾಗೂ ಮಂಗಳೂರಿನ ಮಹಮ್ಮದ್ ಇಶಾಕ್ ಇಸ್ಲಾಂ ಧರ್ಮದ ಬಗ್ಗೆ ಹಾಗೂ ಮೂಡುಬಿದಿರೆಯ ನಿವೃತ್ತ ಉಪನ್ಯಾಸಕ ಅಜಿತ್ ಪ್ರಸಾದ್ ಜೈನ ಧರ್ಮದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

mbd_oct2_5a

ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿ ನಾನು ಪಡೆದದ್ದು ಇನ್ನೊಬ್ಬರಿಗೆ ದೊರೆಯಬೇಕು. ಕೆರೆಯ ನೀರನ್ನು ಕೆರೆಗೆ ಚೆಲ್ಲಬೇಕು. ಬಿಂದುವಿನಿಂದ ಸಿಂಧುವಾಗುತ್ತದೆ. ಅಂತೆಯೇ ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕತೆಯ ಅರಿವನ್ನು ಅಲ್ಪ ಪ್ರಮಾಣದಲ್ಲಿ ನೀಡಲು ಈ ಕಾರ್ಯಕ್ರಮ ಪ್ರೇರಣೆಯಾಗಲಿ. ತನ್ಮೂಲಕ ನಿಜ ಜೀವನದುದ್ದಕ್ಕೂ ಈ ಕಾರ್ಯಕ್ರಮದಲ್ಲಿ ಪಡೆದ ಜ್ಞಾನವು ನಿಮ್ಮನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಹಕಾರಿ, ಮಾರ್ಗದರ್ಶಿಯಾಗಲಿ ಎಂದರು.

ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಧಿತರಿದ್ದರು. ಕಾಲೇಜಿನ 500 ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಡಾ.ಶ್ರುತಕೀರ್ತಿರಾಜ ಸ್ವಾಗತಿಸಿದರು. ಪ್ರಜ್ವಲ್‍ರವರು ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ಸುರೇಶ್ ಬಾಬು ವಂದಿಸಿದರು.

By suddi9

Leave a Reply

Your email address will not be published. Required fields are marked *