ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಸಂದರ್ಭದಲ್ಲಿ ಶೀಘ್ರದಲ್ಲೇ ತನ್ನ ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲಿದ್ದು, ಸಹಕಾರಿ ರಂಗದಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡುವ ಪ್ರಥಮ ಬ್ಯಾಂಕ್ ಆಗಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಹೇಳಿದ್ದಾರೆ.

20sul1

20sul2

20sul3
ಸಂಪಾಜೆಯಲ್ಲಿ ಬ್ಯಾಂಕಿನ 72ನೇ ಶಾಖೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಹೊಸ-ಹೊಸ ತಂತ್ರಜ್ಞಾನವನ್ನು ಸೇವೆಯಲ್ಲಿ ಬಳಸಿಕೊಂಡಾಗ ಮಾತ್ರ ನಾವು ಬೆಳೆಯಲು ಸಾಧ್ಯ. ನಾವು ಮಾತ್ರ ಬೆಳೆಯುವುದಲ್ಲ, ಬೆಳೆಯುವವರನ್ನೂ ಬೆಳೆಸಬೇಕು. ಹಾಗಾಗಿ ಸಂಪಾಜೆ ಪ್ರಾಥಮಿಕ ಸಹಕಾರಿ ವ್ಯವಸಾಯಿಕ ಬ್ಯಾಂಕ್ಗೂ 2 ಲಕ್ಷ ಧನ ಸಹಾಯ ನೀಡುವುದಾಗಿ ಅವರು ಘೋಷಿಸಿದರು. ಕಳೆದ ಕೆಲವು ಸಮಯದಿಂದ ಸ್ಥಗಿತಗೊಂಡಿದ್ದ ದೀಘರ್ಾವಧಿ ಸಾಲ ನೀಡುವ ಪ್ರಕ್ರಿಯೆ ಈ ತಿಂಗಳಲ್ಲಿ ಮತ್ತೆ ಆರಂಭವಾಗಲಿದೆ. ಸ್ವಲ್ಪ ಭಾಗವನ್ನು ಈ ತಿಂಗಳಲ್ಲಿ ಪ್ರಾಥಮಿಕ ಸಹಕಾರಿಗಳಿಗೆ ಬಿಡುಗಡೆ ಮಾಡಲಾಗುವುದು ಎಂದವರು ಹೇಳಿದರು.
ಉದ್ಘಾಟನೆ ಸಂದರ್ಭದಲ್ಲಿಯೇ 10 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿ ಸಂಪಾಜೆ ಶಾಖೆ ದಾಖಲೆ ನಿಮರ್ಿಸಿದೆ. ಇಲ್ಲಿನ ಜನರು ಆಥರ್ಿಕವಾಗಿ ಶ್ರೀಮಂತರು ಅಥವ ಶ್ರೀಮಂತರಲ್ಲದೇ ಇದ್ದರೂ ಹೃದಯ ಶ್ರೀಮಂತಿಕೆ ಉಳ್ಳವರು ಎಂದರು. ಅಧಿಕಾರ ಶಾಶ್ವತ ಅಲ್ಲ, ಅದನ್ನು ಸದುಪಯೋಗ ಮಾಡಿದರೆ ಅದು ಶಾಶ್ವತ. ಸಹಕಾರಿ ರಂಗ ಒಳ್ಳೆಯ ಸೇವೆ ನೀಡುವುದರಿಂದ ಅದು ಬೆಳೆದಿದೆ. ಕಟ್ಟಡ, ಚಿನ್ನ ನಮ್ಮ ಆಸ್ತಿ ಅಲ್ಲ, ನಮ್ಮ ಆಸ್ತಿ ಗ್ರಾಹಕರು. ಅದನ್ನು ಕಾಪಾಡುವುದು ನಮ್ಮ ಧರ್ಮ. ಹಾಗಾದಾಗ ಸಹಕಾರಿ ಸಂಸ್ಥೆಗಳು ಬೆಳೆಯುತ್ತವೆ. ಅಲ್ಲಿ ಇಡುವ ಠೇವಣಿ ಮೇಲೆ ಭರವಸೆ ಇಡಿ. ಅದಕ್ಕೆ ತಾನು ಭದ್ರತೆ ನೀಡುತ್ತೇನೆ ಎಂದರು.
ಗ್ರಾಮೀಣ ಪ್ರದೇಶಗಳು ಬೆಳೆಯಬೇಕು. ಅಲ್ಲಿನ ಜನತೆ ಆಥರ್ಿಕವಾಗಿ ಸ್ವಾವಲಂಭಿಗಳಾಗಬೇಕು. 10 ಕೋಟಿ ಠೇವಣಿ ನೀಡಿದ್ದಕ್ಕೆ 100 ಕೋಟಿ ಸಾಲ ನೀಡಲು ನಾವು ಬದ್ಧರು. ಈ ಶಾಖೆಯಲ್ಲಿ 1 ತಿಂಗಳ ಅವಧಿಯಲ್ಲಿ ವಾಹನ ಸಾಲ ಪಡೆದರೆ ಅದಕ್ಕೆ ಯಾವುದೇ ಬಡ್ಡಿ ಇಲ್ಲ ಎಂದವರು ಪ್ರಕಟಿಸಿದರು. ಶತಮಾನೋತ್ಸವ ವರ್ಷದ ಅಂತ್ಯದ ಒಳಗೆ 101ನೇ ಶಾಖೆಯನ್ನು ಆರಂಭಿಸಲಾಗುತ್ತದೆ ಎಂದವರು ತಿಳಿಸಿದರು.
ಬ್ಯಾಂಕಿನ ಭದ್ರತಾಕೋಶವನ್ನು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಉದ್ಘಾಟಿಸಿದರು. ಸೇವೆಯಲ್ಲಿ ಪೈಪೋಟಿ ನೀಡಲು ಡಿಸಿಸಿ ಬ್ಯಾಂಕ್ ಶಾಖೆ ಆರಂಭಕ್ಕೆ ಸ್ವಾಗತ, ಅಡ್ಡಗಾಲು ಇಲ್ಲ ಎಂದವರು ಹೇಳಿದರು. ಗಣಕೀಕರಣವನ್ನು ಉದ್ಘಾಟಿಸಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಮಾತನಾಡಿ, ಜನಸಾಮಾನ್ಯರಿಗೆ ಹತ್ತಿರವಾದಾಗ ಮಾತ್ರ ಸಂಸ್ಥೆ ಬೆಳೆಯುತ್ತದೆ ಎಂದರು. ಅತಿಥಿಯಾಗಿದ್ದ ಸಂಪಾಜೆ ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಉಪಾಧ್ಯಕ್ಷ ರಾಜಾರಾಮ ಕೀಲಾರ್ ಮಾತನಾಡಿ ಡಿಸಿಸಿ ಬ್ಯಾಂಕ್ ಸಾಧನೆಯ ಕೇಸ್ ಸ್ಟಡಿ ಆಗಬೇಕು, ವಿಶ್ವವಿದ್ಯಾನಿಲಯಗಳು ಈ ಕುರಿತು ಗಮನ ಹರಿಸಬೇಕು ಎಂದರು. ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಿ.ಬಿ.ದಿವಾಕರ ರೈ, ಕಟ್ಟಡ ಮಾಲಕ ನಾಗಪ್ಪ ಗೌಡ ಅರಂಬೂರು, ಸುಳ್ಯ ತಾ.ಪಂ. ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಎಪಿಎಂಸಿ ಅಧ್ಯಕ್ಷ ಸತೀಶ್ ಕೂಜುಗೋಡು, ಸುಳ್ಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಬ್ಯಾಂಕ್ ನಿದರ್ೇಶಕ ಎಸ್.ಬಿ.ಜಯರಾಮ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲ್ಲೂಕಿನ ಪ್ರಾಥಮಿಕ ಸಹಕಾರಿ ಸಂಘಗಳ ವತಿಯಿಂದ ರಾಜೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಟ್ಟಡ ಮಾಲಕ ನಾಗಪ್ಪ ಗೌಡ, ಬ್ಯಾಂಕಿನ ಶಾಖಾ ವ್ಯವಸ್ಥಾಪಕ ದಾಮೋದರ ಕೇನಾಜೆ ಸೇರಿದಂತೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ನಿದರ್ೇಶಕ ಕೆ.ಎಸ್.ದೇವರಾಜ್ ಸ್ವಾಗತಿಸಿ, ಬಿ.ಶಶಿಕುಮಾರ್ ರೈ ವಂದಿಸಿದರು. ಕೆ.ಟಿ.ವಿಶ್ವನಾಥ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *