ಉಡುಪಿ : ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಂದ ಅದಮಾರು ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಹಿರಿಯಡಕ ಸಮೀಪದ ಶ್ರೀಶ ಅವರಿಗೆ ಕುಂಜಾರುಗಿರಿ ಮತ್ತು ಪಾಜಕ ಕ್ಷೇತ್ರದಲ್ಲಿ ಗುರುವಾರ ಧಾರ್ಮಿಕವಿಧಿ ವಿಧಾನಗಳೊಂದಿಗೆ
ನೀಡಲಾಯಿತು.
ಇಂದು ಬೆಳಗ್ಗೆ ಶ್ರೀಶ ಎಸ್. ಅವರಿಗೆ ಬಾಣ ತೀರ್ಥದಲ್ಲಿ ಧಾರ್ಮಿಕ ವಿದ್ವಾಂಸರ ನೇತೃತ್ವದಲ್ಲಿ ಸನ್ಯಾಸ ದೀಕ್ಷೆ ಪೂರ್ವಭಾವಿಯಾದ ವಿಧಿಗಳು ನಡೆದವು. ಬಳಿಕ ಕುಂಜಾರುಗಿರಿ ಶ್ರೀ ದುರ್ಗಾ ದೇವಿ ದೇವಳಕ್ಕೆ ಮೆರವಣಿಗೆ ಮೂಲಕ ಕರೆತಂದು ಅದಮಾರು ಮಠದ ಯತಿಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಮ್ಮ ಉತ್ತರಾಧಿಕಾರಿಯ ಪಟ್ಟಾಭಿಷೇಕ ನಡೆಸಿ ಶ್ರೀ ಈಶಪ್ರಿಯ ತಿರ್ಥ ಎಂಬ ನಾಮಕರಣ ಮಾಡಿದರು, ಬಳಿಕ ಸನ್ಯಾಸ ದೀಕ್ಷೆ ಮತ್ತು ಮಂತ್ರೋಪದೇಶ ನಡೆಸಿದರು.
ಸಮಾರಂಭದಲ್ಲಿ ಅದಮಾರು ಮಠದ ದ್ವಂದ್ವ ಮಠ ಶ್ರೀ ಫಲಿಮಾರು ಮಠದ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಧಾರ್ಮಿಕ ವಿದ್ವಾಂಸರು,ಅದಮಾರು ಮಠದ ದಿವಾಣರಾದ ವೆಂಕಟರಮಣ ಮುಚ್ಚಿಂತಾಯ, ಮಠದ ಅಭಿಮಾನಿಗಳು ಹಾಗೂ ಶಿಷ್ಯವೃಂದ ಹಾಗೂ ಶ್ರೀಶ ಅವರ ಮನೆಯವರು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.
