ಕೈಕಂಬ: ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿಯಲ್ಲಿ ನವರಾತ್ರಿ ಪೂಜಾ ಮಹೋತ್ಸವವು ಅ.1ರಿಂದ ಅ.10 ವಿಜಯದಶಮಿಯವರೆಗೆ ನಡೆಯಲಿದ್ದು ಇದರ ಪ್ರಯುಕ್ತ ಈ ಕ್ಷೇತ್ರದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಮೊದಲನೇ ದಿನವಾದ ಇಂದು ಮಧ್ಯಾಹ್ನ ಭಕ್ತಾದಿಗಳಿಂದ ಹರಕೆಯ ಚಂಡಿಕಾ ಹೋಮ, ಹಾಗೂ ದೇವಳದ ಸನ್ನಿಧಿಯಲ್ಲಿ ಪ್ರತಿನಿತ್ಯ ಸಂಜೆ 6ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಇಂದು ‘ಪೊಳಲಿ ಯಕ್ಷೋತ್ಸವ’ ಯಕ್ಷ ಕಲಾ ಪೊಳಲಿ ಇದರ 21 ನೇ ವಾರ್ಷಿಕೋತ್ಸವ ಅಂಗವಾಗಿ ‘ಯಕ್ಷ-ಗಾನ-ಪಂಚಾಮೃತ’, ಸನ್ಮಾನ. ರಾತ್ರಿ 9.30 ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ‘ಸುಕನ್ಯಾ ಕಲ್ಯಾಣ-ರುಕ್ಮಿಣಿ-ರತಿ ಕಲ್ಯಾಣ’. ಹಾಗೂ ರಾತ್ರಿ 9 ರಿಂದ ಮಹಾಪೂಜೆ ಜರುಗಲಿರುವುದು.

