ಬಂಟ್ವಾಳ: ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನ ಬಡಗಬೆಳ್ಳೂರಲ್ಲಿ ಅ.1 ರಿಂದ ಅ.11ರವರೆಗೆ ನವರಾತ್ರಿ ಮಹೋತ್ಸವ ನಡೆಯಲಿದ್ದು, ಈ ಪ್ರಯುಕ್ತ ಹಲವಾರು ದೇವತಾ ಕಾರ್ಯಕ್ರಮಗಳು ನಡೆಯಲಿವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಅ.1 ಶನಿವಾರದಂದು ಬೆಳಿಗ್ಗೆ 8ರಿಂದ ಪ್ರಾರ್ಥನೆ, ತೋರಣ ಮುಹೂರ್ತ, ಗಣಯಾಗ, ನವಕಲಾಶಭೀಷೇಕ, ಪ್ರಧಾನ ಹೋಮ, ಕಲಶ ಪ್ರತಿಷ್ಠೆ, ನವರಾತ್ರಿ ಪೂಜಾರಂಭ, ನಾಗತಂಬಿಲ, ಮಧ್ಯಾಹ್ನ ಮಹಪೂಜೆ, ಅನ್ನಸಂತರ್ಪಣೆ, ರಾತ್ರಿ 7 ಕ್ಕೆ ” ಶ್ರೀ ಆದಿಶಕ್ತಿ ಮಹಿಳಾ ಮಂಡಳಿ’ ಇವರಿಂದ ಭಜನೆ, ರಾತ್ರಿ 9ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ
ಅ.2ರಂದು ರವಿವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ 7ಕ್ಕೆ “ಶ್ರೀ ಮಣಿಕಂಠ ಭಜನಾ ಮಂಡಳಿ, ಮಣಿಕಂಠಪುರ” ಇವರಿಂದ ಭಜನೆ. ರಾತ್ರಿ 9ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ.
ಅ.3ರಂದು ಸೋಮವಾರ ಅ.2ರಂದು ರವಿವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಂಜೆ 6ರಿಂದ “ಶ್ರೀ ಕಾವೇಶ್ವರ ಯಕ್ಷಗಾನ ಮಂಡಳಿ”ಯವರಿಂದ ಯಕ್ಷಗಾನ ತಾಳಮದ್ದಲೆ, ರಾತ್ರಿ 9ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ.
ಅ.4ರಂದು ಮಂಗಳವಾರ, .ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ 7ಕ್ಕೆ ಶ್ರೀ ಆದಿಶಕ್ತಿ ಭಜನಾ ಮಂಡಳಿ ಇವರಿಂದ ಭಜನೆ, ರಾತ್ರಿ 9ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ.
ಅ.5ರಂದು ಬುಧವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ 7ಕ್ಕೆ “ಶ್ರೀ ವಿಠೋಭ ಬಾಲ ಭಜನಾ ಮಂಡಳಿ, ಪಲ್ಲಿಪಾಡಿ” ಇವರಿಂದ ಭಜನೆ, ರಾತ್ರಿ 9ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಮಹಾಗಣಪತಿ ದೇವರಿಗೆ ಅಪ್ಪದ ಪೂಜೆ, ಅನ್ನಸಂತರ್ಪಣೆ. ರಾತ್ರಿ 9.30 ರಿಂದ ಬಂಗಾರ್ ಕಲಾವಿದೆರ್ ಗಂಜಿಮಠ ಅಭಿನಯಿಸುವ ತುಳು ಸಾಮಾಜಿಕ ಹಾಸ್ಯಮಯ ನಾಟಕ ” ನಮ ಎನ್ನಿಲೆಕ ಅತ್ತ್”.
ಅ.6ರಂದು ಗುರುವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಂಜೆ 6ಕ್ಕೆ ಶ್ರೀ ಆದಿಶಕ್ತಿ ಯಕ್ಷಗಾನ ಮಂಡಳಿಯಿಂದ ‘ಯಕ್ಷಗಾನ ತಾಳಮದ್ದಲೆ‘. ರಾತ್ರಿ 9ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ.
ಅ.7ರಂದು ಶುಕ್ರವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ರಾತ್ರಿ 7ಕ್ಕೆ “ಶ್ರೀ ಕಾವೇಶ್ವರ ಭಜನಾ ಮಂಡಳಿ”ಯವರಿಂದ ಭಜನೆ, ರಾತ್ರಿ 9ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ.
ಅ.8ರಂದು ಶನಿವಾರ ಪೂರ್ವಾಹ್ನ ಶರದಾ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಧಮ್ದೈವಗಳಿಗೆ ಪರ್ವ, ಅನ್ನಸಂತರ್ಪಣೆ, ಸಂಜೆ 7ಕ್ಕೆ ಭಜನೆ, ರಾತ್ರಿ 9ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ. ರಾತ್ರಿ 9.30ರಿಂದ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ “ಬೊಳ್ಳೂರು ದಸರಾ ಟ್ರೋಫಿ”-2016.
ಅ.9ರಂದು ರವಿವಾರ ಪೂರ್ವಾಹ್ನ ‘ಚಂಡಿಕಯಾಗ’, ಬೆಳಿಗ್ಗೆ 9ರಿಂದ 12.30ರವರೆಗೆ ಸದ್ರಿ ದೇವಸ್ಥಾನ ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಮಂಗಳೂರು ಇವರ ಸಹಭಾಗಿತ್ವದಲ್ಲಿ “ರಕ್ತದಾನ ಶಿಬಿರ‘, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ರಾತ್ರಿ 9ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ. ರಾತ್ರಿ 9.30ರಿಂದ ಯಕ್ಷಚಿಗುರು ಬೆಳ್ಳೂರು ಅರ್ಪಿಸುವ ಯಕ್ಷಗಾನ ಬಯಲಾಟ ‘ಶ್ರೀ ದೇವಿ ಮಹಾತ್ಮೆ’.
ಅ.10ರಂದು ಸೋಮವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ರಾತ್ರಿ 7ಕ್ಕೆ “ಶ್ರೀ ಆದಿಶಕ್ತಿ ಭಜನಾ ಮಂಡಳಿ ” ಇವರಿಂದ ಭಜನೆ, ರಾತ್ರಿ 9ಕ್ಕೆ ಕಲ್ಪೋಕ್ತ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ.
ಅ.11ರಂದು ಮಂಗಳವಾರ ಪೂರ್ವಾಹ್ನ 8ಕ್ಕೆ ಕಲಶ ವಿಸರ್ಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಶಾರದಾಪೂಜೆ, ಸಂಜೆ 6ರಿಂದ ಅನ್ನಸಂತರ್ಪಣೆ, ನಂತರ ಭದ್ರಕಾಳಿ ಚೆಂಡೆ ಸೆಟ್, ನಂತೂರು ಪದವು ಮಂಗಳೂರು ಇವರಿಂದ ” ಚೆಂಡೆ ಸಿಂಗಾರಿ ಮೇಳ” ನಂತರ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಬಡಗಬೆಳ್ಳೂರು ಇವರಿಂದ ತಾಲೀಮು ಪ್ರದರ್ಶನ ಹಾಗೂ ವಿವಿಧ ವೇಷ ವಿನೋದಾವಳಿಗಳೊಂದಿಗೆ ಶಾರದಾ ಮಾತೆಯ ಶೋಭಾಯಾತ್ರೆ ದೇವಸ್ಥಾನದಿಂದ ಹೊರಟು ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಫಲ್ಗುಣಿ ನದಿಯಲ್ಲಿ ವಿಸರ್ಜಣೆ.

