ಸುದ್ದಿ9 ಕೈಕಂಬ : ಗುರುಪುರ ಬಂಟರ ಸಂಘವು ಸಮಾಜದ ಬಡವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಬಾಂಧವರಿಗೆ ನೀಡುತ್ತಿರುವ ಸಹಾಯಧನವು ಅರ್ಥಪೂರ್ಣವಾದುದು .
ಸಂಘದ ಯುವ ಸದಸ್ಯರು ಇನ್ನು ಮುಂದೆಯು ಇಂತಹ ಸಮಾಜಮುಖಿಯಾದ ಕೆಲಸವನ್ನು ಮಾಡುತ್ತಾ ಸಮಾಜ ಹಾಗೂ ಸಂಘದ ಏಳಿಗೆಯಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವಂತಾಗಲಿ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಅವರು ಇತ್ತಿಚೇಗೆ ಗುರುಪುರ ವೈದೈನಾಥ ಕಲ್ಯಾಣ ಸಮುದಾಯ ಭವನದಲ್ಲಿ ಗುರುಪುರ
ಬಂಟರ ಮಾತೃ ಸಂಘದಿಂದ ಆಥರ್ಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಗೂ ಸಮಾಜ ಭಾಂದವರಿಗೆ ಮನೆ ದುರಸ್ತಿಗಾಗಿ ಸಹಾಯಧನವನ್ನು ವಿತರಿಸುವ ಸಂದರ್ಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಪೆರ್ಮಂಕಿ ಸುದರ್ಶನ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಮೇಶ್ ಮುಂಡ ವಹಿಸಿದ್ದರು.
ವೇದಿಕೆಯಲ್ಲಿ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ನಿಟ್ಟೆ ರವಿರಾಜ ಶೆಟ್ಟಿ, ಮಂಗಳೂರು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿರಾಜ ಶೆಟ್ಟಿ ಕೊಳಂಬೆ ,ಪದವು ಮೇಗಿನಮನೆ ಉಮೇಶ್ ರೈ, ಕಾರಮೊಗರುಗುತ್ತು ಉದ್ಯಮಿ ಪ್ರೇಮನಾಥ ಮಾರ್ಲ ಉಪಸ್ಥಿತರಿದ್ದರು.
ಮಹಿಳಾ ಘಟಕದ ಅಧ್ಯಕ್ಷೆ ವಾಮಂಜೂರು ಜಯಲಕ್ಷ್ಮಿಶೆಟ್ಟಿ, ಉಪಾಧ್ಯಕ್ಷೆ ನಳಿನಿ ಶೆಟ್ಟಿ ಗುರುಪುರ ನಿರ್ದೇಶಕರಾದ ಪೆರ್ಮಂಕಿಗುತ್ತು ಪದ್ಮನಾಭ ಶೆಟ್ಟಿ, ಅಡ್ಡೂರು ಸುಬ್ಬಯ್ಯ ಭಂಡಾರಿ ,ರಘುರಾಮ ಕಾವ ಉಪಸ್ಥಿತರಿದ್ದರು.
ರಾಜ್ ಕುಮಾರ್ ಶೆಟ್ಟಿ ಸ್ವಾಗತಿಸಿ ಸತ್ಯಾನಂದ ಶೆಟ್ಟಿ ವಂದಿಸಿದರು.

