ಉಡುಪಿ: ಕೆ.ಜಿ ರಸ್ತೆ ಸೇತುವೆಯಲ್ಲಿ ಸಂತೆಕಟ್ಟೆಯ ಚಂದ್ರಶೇಖರ ಎಂಬುವವರ ಪುತ್ರಿ ಚೈತ್ರಾ(18) ಎಂಬ ಯುವತಿ ಎಲ್ಲರೂ ನೋಡುತ್ತಿದ್ದಂತೆಯೇ ಮೊಬೈಲಲ್ಲಿ ಮಾತನಾಡುತ್ತಾ ಅಳುತ್ತಾ, ಸೇತುವೆಯಿಂದ ತುಂಬಿ ಹರಿಯತ್ತಿದ್ದ ನದಿಗೆ ಜಿಗಿದ ಘಟನೆ ಸೆ.28 ಬುಧವಾರದಂದು ಸಂಜೆ ನಡೆದಿದೆ.
ಅಂಬಲಪಾಡಿಯ ನೆಟ್ಜಿ ಮೊಬೈಲ್ ಅಂಗಡಿಯ ಉದ್ಯೋಗಿ ಜ್ಯೋತಿ ಎಂಬವರ ಮಗಳು ಎಂದಿನಂತೆ ಮನೆಗೆ ತೆರಳುವಾಗ ಸೇತುವೆ ಬಳಿ ಹೋಗುವ ಸಂದರ್ಭದಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳಂತೆ. ಬ್ಯಾಗ್, ಚಪ್ಪಲಿಯನ್ನು ಅಲ್ಲೇ ಬಿಟ್ಟು ಮೊಬೈಲ್ ಸಹಿತ ಸ್ವರ್ಣ ನದಿಗೆ ಜಿಗಿದಿದ್ದಾಳೆ.
ಆಕೆಯ ಬ್ಯಾಗ್ನಲ್ಲಿದ್ದ ದಾಖಲೆಗಳಿಂದ ಅವಳ ಗುರುತು ಪತ್ತೆಯಾಗಿದೆ. ಆದರೆ ಯಾವ ಕಾರಣಕ್ಕೆ ನದಿಗೆ ಹಾರಿದಳು ಎಂಬುದು ನಿಗೂಢವಾಗಿದೆ. ಡಿವೈ ಎಸ್ಪಿ ಕುಮಾರಸ್ವಾಮಿ ಸ್ಥಳಕ್ಕೆ ಧಾವಿಸಿದ್ದಾರೆ. ನದಿಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದ್ದು, ಬ್ರಹ್ಮಾವರದಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ಧವಿಸಿದೆ.

