ಕೈಕಂಬ: ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸ್ ಕಂಡಕ್ಟರ್ ಗುರುಪುರ ಮಠದ ಬೈಲಿನ ಸಂಜೀವ ಶೆಟ್ಟಿ ಹಾಗೂ ದೇವಕಿ ಶೆಟ್ಟಿಯವರ ಮಗನಾದ ದೇವದಾಸ್ ಶೆಟ್ಟಿ(48)ಯವರು ಸೆ.25 ರಂದು ಭಾನುವಾರ ಬೆಳಿಗ್ಗೆ ಬಸ್ಸು ಪ್ರಯಾಣಿಕೆ ಮಹಿಳೆಯರೊಬ್ಬರ ಜೊತೆ ಚಿಲ್ಲರೆ ವಿಷಯವಾಗಿ ಜಗಳವಾಡಿ ಬೇಸತ್ತು ಕುಮಾರಧಾರ ಸೇತುವೆಗೆ ಬಸ್ಸಿನಿಂದ ಧುಮುಕಿ ನದಿಗೆ ಹಾರಿದ ಘಟನೆ ಸೆ.25 ರಂದು ನಡೆದಿತ್ತು.
ದೇವ್ ದಾಸ್ ಶೆಟ್ಟಿ ಮನೆ:

ಘಟನೆ ನಡೆದ ಸುದ್ದಿ ತಿಳಿದು ಗುರುಪುರ ಭಾಗದ ಮಂಗಳೂರು ತಾ.ಪಂ ಸದಸ್ಯ ಸಚಿನ್ ಅಡಪ,ಸದಾಶಿವ ಶೆಟ್ಟಿ, ಕಿಟ್ಟಣ್ಣ ರೈ,ಹಾಗೂ ಊರಿನ ಪ್ರಮುಖರು ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ. ಅಲ್ಲದೇ ದೇವ್‍ದಾಸ್ ಶೆಟ್ಟಿಯ ಮಗ ಪವನ್ ಶೆಟ್ಟಿಯೂ ಕೂಡಾ ಆ ಸ್ಥಳಕ್ಕೆ ತೆರಳಿದ್ದಾರೆ. ಸುಬ್ರಹ್ಮಣ್ಯ ಕುಮಾರಧಾರ ನದಿಗೆ ಹಾರಿ ಕೊಚ್ಚಿ ಹೋದ ನಿರ್ವಾಹಕನಿಗಾಗಿ ಶೋಧ ಕಾರ್ಯಾಚರಣೆಯು ಎರಡನೇ ದಿನವಾದ ಸೋಮವಾರವು ನಡೆಯಿತು. ಆದರೆ ಎರಡು ದಿನ ಕಳೆದರೂ ದೇವದಾಸ್‍ನ ಮೃತದೇಹ ಇನ್ನೂ ಪತ್ತೆಯಾಗಿಲ್ಲ, ದೇವ್ ದಾಸ್ ಶೆಟ್ಟಿ ಮರಣ ಹೊಂದಿದ ಘಟನೆ ಮನೆಯಲ್ಲಿ ಹಿರಿಯ ಮಗನಾದ ಪವನ್ ಶೆಟ್ಟಿಗೆ ಮಾತ್ರ ತಿಳಿದಿದ್ದು, ಮನೆಯ ಸದಸ್ಯರಿಗೆ ಕೋಮ ಸ್ಥಿತಿಯಲ್ಲಿದ್ದಾರೆಂದು ಹೇಳಲಾಗಿದೆ ಎಂದು ಅವರ ಮಗ ತಿಳಿಸಿದ್ದಾನೆ.
ದೇವದಾಸ್ ಶೆಟ್ಟಿಯವರು ಸುಮಾರು 15 ವರ್ಷಗಳಿಂದ ಮಂಗಳೂರು ಘಟಕದ ಕೆಎಸ್‍ಆರ್‍ಟಿಸಿಯಲ್ಲಿ ಬಸ್ಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೇ ಅವರಿಗೆ 2015 ರಲ್ಲಿ ಮಂಗಳೂರು ಘಟಕದ ‘ಬೆಸ್ಟ್ ಕಂಡಕ್ಟರ್’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದಿನಂಪ್ರತಿ ಅವರು ಕತ್ರ್ಯವ್ಯ ಮುಗಿಸಿ ತನ್ನ ಮನೆಗೆ ಬಂದು ಕರ್ತವ್ಯಕ್ಕೆ ಹೋಗುತ್ತಿದ್ದರು.
ಅವರ ಪತ್ನಿ ಉಷಾ ಡಿ. ಶೆಟ್ಟಿಯವರು ಅಂಗನವಾಡಿ ಶಿಕ್ಷಕಿಯಾಗಿದ್ದು ಅನಾರೋಗ್ಯದಿಂದಿದ್ದಾರೆ. ಅವರ ಎರಡು ಮಕ್ಕಳಲ್ಲಿ ಹಿರಿಯ ಮಗ ಸಿ.ಎ ಸ್ನಾಕೋತ್ತರ ಪದವಿಯನ್ನು ವ್ಯಾಸಾಂಗ ಮಾಡುತ್ತಿದ್ದು, ಮಗಳು ಯಸಿಕಾ ಶೆಟ್ಟಿ ಪದವಿ ಓದುತ್ತಿದ್ದಾಳೆ. ಇವರು ತನ್ನ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಕುಟುಂಬಕ್ಕೆ ಆಧಾರ ಸ್ಥಂಭವಾಗಿದ್ದರು.

