ಮೂಡುಬಿದರೆ: ಯೂನಿಯನ್ ಬ್ಯಾಂಕಿನ ಎಲ್ಲಾ ಶಾಖೆಗಳು ಗಣಕೀಕರಣಗೊಂಡಿದ್ದು, ಇ-ಸ್ಟ್ಯಾಂಪಿಂಗ್, ಸಿಟಿಎಸ್ ಚೆಕ್ಬುಕ್ ಸಹಿತ ಹಲವು ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಸಹಕಾರಿ ಯೂನಿಯನ್ ಅಧ್ಯಕ್ಷನಾಗಿ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಲಭಿಸಿದ್ದು ಉತ್ತಮ ಕೆಲಸ ಮಾಡಲು ಪ್ರಯತ್ನಿಸುವುದಾಗಿ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಹರೀಶ್ ಆಚಾರ್ ಹೇಳಿದರು.

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ನಿನ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಆಚಾರ್ ಅವರಿಗೆ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಡಳಿತ ಮಂಡಳಿ ಮತ್ತು ಸಿಬಂದಿಗಳ ವತಿಯಿಂದ ನಡೆದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಯಾವುದೇ ಬ್ಯಾಂಕ್ಗಳಿಗೆ ಆಡಳಿತ ಮಂಡಳಿ ಶಾಶ್ವತವಲ್ಲ. ಬ್ಯಾಂಕ್ಗಳ ಬೆಳವಣಿಗೆಯಲ್ಲಿ ಸಿಬಂದಿಗಳ ಪಾತ್ರ ದೊಡ್ಡದು. ಬ್ಯಾಂಕ್ನ ಸಿಬ್ಬಂದಿಗಳು ಧನಾತ್ಮಕ ಚಿಂತನೆ, ಪೂರ್ವಯೋಜನೆ, ಪೂರ್ಣಯೋಜನೆ ರೂಪಿಸಿ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಯಶಸ್ಸು ಲಭಿಸುತ್ತದೆ. ಬ್ಯಾಂಕಿನ ಮಾಜಿ ಅಧ್ಯಕ್ಷ ಮುನಿಯಾಲ್ ದಾಮೋದರ ಆಚಾರ್ಯ ಹರೀಶ್ ಆಚಾರ್ ಅವರನ್ನು ಸನ್ಮಾನಿಸಿ ಮಾತನಾಡಿ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹರೀಶ್ ಆಚಾರ್ ನೇತೃತ್ವದ ತಂಡವು ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅವರ ಸಾಧನೆಗೆ ಸಹಕಾರಿ ಯೂನಿಯನ್ನಿನ ಅಧ್ಯಕ್ಷತೆಯು ಲಭಿಸಿದೆ ಎಂದು ಪ್ರಶಂಶಿಸಿದರು. ಬ್ಯಾಂಕಿನ ಮಹಾ ಪ್ರಭಂದಕ ಜಯರಾಮ ಕೆ.ಸಿಬಂದಿಗಳ ಪರವಾಗಿ ಅಭಿನಂದನಾ ಭಾಷಣ ಮಾಡಿ ಹರೀಶ್ ಆಚಾರ್ ಅವರ ಅಧಿಕಾರಾವಧಿಯಲ್ಲಿ ಬ್ಯಾಂಕ್ ಸಿಬಂದಿಗಳಿಗೆ ನೀಡಿದ ಸೌಲಭ್ಯಗಳು, ಬ್ಯಾಂಕಿನ ಏಳಿಗೆಗಾಗಿ ಹಮ್ಮಿಕೊಂಡ ಯೋಜನೆಯನ್ನು ವಿವರಿಸಿದರು.
ಬ್ಯಾಂಕ್ ಉಪಾಧ್ಯಕ್ಷ ಕೆ.ಯಶವಂತ, ನಿದರ್ೇಶಕರಾದ ನಲ್ಕ ಗೋಪಾಲಕೃಷ್ಣ ಆಚಾರ್ಯ, ಡಿ.ಬಾಸ್ಕರ ಆಚಾರ್ಯ ಅಂಡಿಜೆ, ಶಕುಂತಳಾ ಬಿ.ರಾವ್, ಜಗದೀಶ್ ಆಚಾರ್ಯ ಪಡುಪಣಂಬೂರು ಮಾತನಾಡಿದರು.
ನಿದರ್ೇಶಕರಾದ ಮಂಜೇಶ್ವರ ಸತೀಶ್ ಆಚಾರ್, ಎಸ್.ಜಯಶ್ರೀ ವಿ.ಆಚಾರ್, ರಾಜೇಶ್ ನೆತ್ತರ, ಬಿ.ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು.
ಬ್ಯಾಂಕ್ ವ್ಯವಸ್ಥಾಪಕ ಸದಾನಂದ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು
