ಬಂಟ್ವಾಳ: ದ್ವಿಚಕ್ರ ವಾಹನದಲ್ಲಿ ಬಂದು ಒಂಟಿ ಮಹಿಳೆಯ ಕತ್ತಿನಲ್ಲಿದ್ದ 24 ಗ್ರಾಂ ತೂಕದ 50,000 ರೂ. ಮೌಲ್ಯದ ಕರಿಮಣಿ ಸರವನ್ನು ಎರಗಿಸಿ ಪರಾರಿಯಾದ ಘಟನೆ ಕುರಿಯಾಳ ದುರ್ಗಾನಗರದಲ್ಲಿ ಸೆ.25 ರಂದು ನಡೆದಿದೆ.

crime

ದುರ್ಗಾ ನಗರ ನಿವಾಸಿ ಗುಲಾಬಿ(39) ಇಲ್ಲಿನ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಿದ್ದ ಸಂದರ್ಭ ಒಂದೇ ಬೈಕ್ನಲ್ಲಿರುವ ಮೂವರು ಯುವಕರು ದುರ್ಗಾನಗರಕ್ಕೆ ಹೋಗುವ ರಸ್ತೆ ಯವುದು ಎಂದು ಪ್ರಶ್ನಿಸಿದ್ದಾರೆ. ಅವರು ಕುಳಿತಲ್ಲಿನಿಂದ ಎದ್ದು ಸರಿಯಾಗಿ ಕೇಳಿಸಿಕೊಳ್ಳುವ ಹಂತದಲ್ಲಿ ಕತ್ತಿನಲ್ಲಿದ್ದ ಸರವನ್ನು ಎಗರಿಸಿ ವಾಹನ ಚಲಾಯಿಸಿಕೊಂಡು ಹೋಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ಸಿದ್ಧಕಟ್ಟೆ ಕೊರ್ಯಾರು ಎಂಬಲ್ಲಿ ಇದೇ ಮಾದರಿಯಲ್ಲಿ ಮಹಿಳೆಯೊಬ್ಬರ ಕತ್ತಿನಿಂದ ಸರ ಎಳೆದು ದ್ವಿಚಕ್ರ ವಾಹನ ಚಾಲಕರು ಪರಾರಿಯಾಗಿದ್ದರು ಎಂಬುದನ್ನು ಸ್ಮರಿಸಬಹುದು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *