ಮಂಗಳೂರು: ಯೇನೆಪೋಯ ದಂತ ಕಾಲೇಜ್ ಮತ್ತು ಆಸ್ಪತ್ರೆ , ಯೇನೆಪೋಯ ವಿಶ್ವವಿದ್ಯಾಲಯ ಹಾಗೂ ವಿಷ್ಣು ಯುವಕ ಸಂಘ ದ, ಸಹಕಾರದಲ್ಲಿ ದಂತ ತಪಾಸಣ ಹಾಗೂ ಚಿಕಿತ್ಸಾ ಶಿಬಿರವು ವಿಧ್ಯಾ ಎಜುಕೇಶನ್ ಸೆಂಟರ್ ನಲ್ಲಿ ಸೆ.18 ರಂದು ನಡೆಯಿತು.
ಶ್ರೀಯುತ ಮೊಯಿದಿನ್ ಬಾವಾ, ಶಾಸಕರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ , ಶ್ರೀಯುತ ಮಿಥುನ್ ರೈ ,ದ.ಕ ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷರು, ಡಾ. ರೇಖಾ ಪಿ. ಶೆಣೈ , ಡಾ. ಮಲ್ಲಿಕ ಶೆಟ್ಟಿ, ಶ್ರೀಯುತ ಭರತ್ , ದಂತಕಾಲೇಜ್ ಸಂಯೋಜಕರು, ಶ್ರೀಯುತ ರಮೇಶ್ ,ಅಧ್ಯಕ್ಷರು, ವಿಷ್ಣು ಯುವಕ ಸಂಘ , ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

