ಕೈಕಂಬ: ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮ ವತಿಯಿಂದ ಸೆ. 24 ಮತ್ತು 25ರಂದು ಬಡಗಬೆಳ್ಳೂರು ಕೊಳತ್ತಮಜಲುವಿನಲ್ಲಿ 162 ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯ ಪ್ರಯುಕ್ತ ಏಕಾಹ ಭಜನಾ ಕಾರ್ಯಕ್ರಮ  ನಡೆಯಿತು. ಬಿಲ್ಲವ ಸಮಾಜ ಸೇವಾ ಸಂಘ ಬಂಟ್ವಾಳ ಇದರ ಅಧ್ಯಕ್ಷ  ಸೇಸಪ್ಪ ಕೋಟ್ಯಾನ್ ಪಚಿನಡ್ಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

03

dsc_5950

dsc_5984

018

img-20160925-wa0132

ನಾನಾ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ :

ಸೆ. 24ರಂದು  ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಮರುದಿನ ಸೆ.25 ಭಾನುವಾರ 8 ಗಂಟೆಯವರೆಗೆ ನಾನಾ ಭಜನಾ ಸಂಕೀರ್ತನೆಗಳು ನಡೆಯಿತು.

011

05

012

014

dsc_5952

017

dsc_5989

dsc_5990

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಂಗಾಧರ ಜೆ. ಪೂಜಾರಿ, ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮದ ಅಧ್ಯಕ್ಷರು, ವಹಿಸಿದ್ದರು.  ಈ ಸಂದರ್ಭದಲ್ಲಿ  ಉದ್ಯಮಿಗಳಾದ ಪ್ರಕಾಶ್ ಅಂಚನ್ ಭುವನೇಶ್ ಪಚಿನಡ್ಕ ಅವರುಗಳನ್ನು ಗೌರವಿಸಲಾಯಿತು. ನಿತ್ಯ ಪೂಜಾ ವಿಧಿ ವಿಧಾನಗಳು ಎಂ. ಲೋಕೇಶ್ ಶಾಂತಿ ಇವರ ಸಾರಥ್ಯದಲ್ಲಿ ನಡೆದವು. ಅರ್ಚಕರಾದ ಹೆಚ್. ಎಸ್. ಜನಾರ್ಧನ್ ಹಾಗೂ ಚಂದ್ರಹಾಸ  ಉಪಸ್ಥಿತರಿದ್ದರು.  ಹಾಗೂ ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 75 ಶೇ. ಕ್ಕಿಂತ ಅಧಿಕ ಅಂಕ ಪಡೆದ  ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ವಿತರಿಸಲಾಯಿತು.

img-20160925-wa0125

img-20160925-wa0122

img-20160925-wa0131

img-20160925-wa0129

img-20160925-wa0134

ಪಂಚಗ್ರಾಮದ ಗೌರವಾಧ್ಯಕ್ಷ  ತಾಚಪ್ಪ ಪೂಜಾರಿ, ಅಧ್ಯಕ್ಷ ಗಂಗಾಧರ ಪೂಜಾರಿ, ಕಮಲಾಕ್ಷ ಪೂಜಾರಿ, ರಾಜು ಕೋಟ್ಯಾನ್, ಬಿ.ಕೆ.ಸರೋಜಿನಿ, ರೇವತಿ ರತ್ನಾಕರ್ ಬಡಗಬೆಳ್ಳೂರು , ಕೂರ್ಯಾಳ ಮಹಿಳಾ ಸಂಘಟನಾ ಕಾರ್ಯದರ್ಶಿಗಳು ಮತ್ತು ಮಹಿಳಾ ಮಂಡಳಿ ಸರ್ವಸದಸ್ಯರು ಮತ್ತು ಗ್ರಾಮದ ಸಮಿತಿ ಅಧ್ಯಕ್ಷರುಗಳು ಹಾಗೂ ಪದಾದಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *