ಕಟೀಲು: ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಇಲ್ಲಿ ನವರಾತ್ರಿ ಪುಜಾ ಮಹೋತ್ಸವ ಅ.1ರಿಂದ ಅ.11 ವಿಜಯ ದಶಮಿಯವರೆಗೆ ನಡೆಯಲಿದೆ. ಈ ಸಂದರ್ಭ ಕ್ಷೇತ್ರದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ನಡೆಯಲಿದೆ.

24vm-kateel-devi-jpg

ವಿಶೇಷ ದಿನಗಳು:
ಅ.6ಗುರುವಾರ ಲಲಿತಾ ಪಂಚಮಿ ಅ.8 ಶನಿವಾರ ಲಲಿತಾ ಪಂಚಮಿ ಅ.9 ಭಾನುವಾರ ದುರ್ಗಾಷ್ಟಮಿ, ಅ.10 ಸೋಮವಾರ ಮಹಾ ನವಮಿ, ಅ.11 ಮಂಗಳವಾರ ವಿಜಯದಶಮಿ, ಮಹಾ ಜಯಂತಿ. ಅ.1ರಿಂದ ನವರಾತ್ರಿಯ ಎಲ್ಲಾ ದಿನಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ತನಕ ದೇವಳದ ಹೊರಾಂಗಣದ ವೇದಿಕೆಯಲ್ಲಿ ನಾನಾ ತಂಡಗಳಿಂದ ಭಜನೆ

ಸಾಂಸ್ಕೃತಿಕ ಕಾರ್ಯಕ್ರಮ: ದೇವಳದ ಸರಸ್ವತೀ ಸದನದಲ್ಲಿ ಪ್ರತಿನಿತ್ಯ ಸಂಜೆ 5.30ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.1 ಪವಿತ್ರಾ ಭಟ್ ಮುಂಬೈಇವರಿಂದ ಭರತನಾಟ್ಯ ಅ.2 ಯಕ್ಷಗಾನ ಗಾನಸು ಭಯಾಜಿ ಯಕ್ಷಮಿತ್ರ ಮಂಡಳಿ ಇವರಿಂದ ‘ಶ್ರೀ ಕೃಷ್ಣಲೀಲೆ’ ಯಕ್ಷಗಾನ ಅ.3 ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಇವರಿಂದ ನೃತ್ಯ ವೆವಿಧ್ಯ ಅ.4 ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಜಯನಗರ ಬೆಂಗಳೂರು ಇವರಿಂದ ಭರತನಾಟ್ಯ ಅ.5 ಮೈಸೂರು ರಾಮಚಂದ್ರ ಆಚಾರ್ಯ ಬಳಗದಿಂದ ಭಕ್ತಿ ಸಂಗೀತ, ಅ.7 ಪ್ರಣತಿ ಆಚಾರ್ಯ ಉಡುಪಿ ಇವರಿಂದ ಭರತನಾಟ್ಯ ಅ.6 ಪೂಜಾದೇವ್ ಬಳಗ ಕಲಾ ಸಂದೇಶ ಪ್ರತಿಷ್ಠಾನ ಮೈಸೂರು ಇವರಿಂದ ಭರನಾಟ್ಯ. ಅ.8 ಕಾವ್ಯಶ್ರೀ ನಾಗರಾಜ್ ಬೆಂಗಳೂರು ಇವರಿಂದ `ಭರತನಾಟ್ಯ ಅ.9 ವಾಣೀ ಶ್ರೀ ಹೆಗಡೆ ಮತ್ತು ಬಳಗ ಬೆಂಗಳೂರು ಇವರಿಂದ ಉತ್ತರಾದಿ ಸಂಗೀತ ಅ.10 ಹೆಜ್ಜೆ-ಗೆಜ್ಜೆ-ನಾಟ್ಯ ಸಂಸ್ಥೆ ಉಡುಪಿ ಇವರಿಂದ ನೃತ್ಯ ವೈವಿಧ್ಯ.

ಯಕ್ಷಗಾನ: ಅ.1 ಕೃಷ್ಣಜನ್ಮ-ಪೂತನೀವ, ಅ.2-ಶ್ರೀ ಕೃಷ್ಣಲೀಲೆ, ಅ.6-ಜಾಬಂವತೀ ಕಲ್ಯಾಣ, ಅ.7-ಶ್ರೀ ಕೃಷ್ಣ ಪಾರಿಜಾತ, ಅ.8-ನರಕಾಸುರ ವಧೆ, ಅ.9-ಮಾಗದವಧೆ ಅ.10 ಅಗ್ರಪೂಜೆ, ಅ.11 ಮಧ್ವಜಯಂತಿ ಪ್ರಯುಕ್ತ ಪ್ರಸಿದ್ಧ ಕಲಾವಿದರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀಪೂರ್ಣಪ್ರಜ್ಞಾ ವಿಜಯ’ ಯಕ್ಷಗಾನ ತಾಳಮದ್ದಲೆ ಪ್ರದರ್ಶನಗೊಳ್ಳಲಿದೆ.

ದಸರಾ ಮೆರವಣಿಗೆ: ಕಟೀಲು ನವರಾತ್ರಿಗೆ ಸಂಬಂಧಿಸಿ ಮುರನೇ ದಿನ (ಅ.3) ಕಟೀಲು ಗ್ರಾಮಸ್ಥರು, ಲಲಿತಾಪಂಚಮಿ (ಅ.6) ದಿನ ಕೊಡೆತ್ತೂರು ಮಾಗಣೆ ದಸರಾ ಮೆರಮಣಿಗೆ, ಮೂಲಾನಕ್ಷತ್ರ (ಅ.8) ದಿನ ಎಕ್ಕಾರು ಗ್ರಾಮಸ್ಥರ ಮೆರವಣಿಗೆ ಕಟೀಲು ಕ್ಷೇತ್ರಕ್ಕೆ ಆಗಮಿಸಿ ನವರಾತ್ರಿ ವಿಜೃಂಭಣೆಯನ್ನು ಹೆಚ್ಚಿಸುತ್ತವೆ.

By suddi9

Leave a Reply

Your email address will not be published. Required fields are marked *