ಗುರುಪುರ ವ್ಯವಸಾಯ ಸೇವಾ ಸಹಕಾರ ಸಂಘದ 2015-16 ನೇ ಸಾಲಿನ ಮಹಾಸಭೆಯು ಸಂಘದ ಅಧ್ಯಕ್ಷ ಶ್ರೀ ವಿನಯ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘವು 6797 ಸದಸ್ಯರನ್ನೊಳಗೊಂಡಿದ್ದು 1.51 ಕೋಟಿ ರೂಪಾಯಿ ಪಾಲು ಬಂಡವಾಳ, 36.59 ಕೋಟಿ ರೂಪಾಯಿ ಠೇವಣಿಯನ್ನು ಹೊಂದಿದೆ. 2.27 ಕೋಟಿ ನಿಧಿಗಳಿದ್ದು 2.14 ಕೋಟಿ ರೂ. ಧನ ವಿನಿಯೋಗಿಸಿದೆ. 64 ಲಕ್ಷ ರೂ. ಮಾರಾಟದಿಂದ 6 ಲಕ್ಷ ರೂ. ಲಾಭ ಗಳಿಸಿದೆ. ವರ್ಷದಲ್ಲಿ 28.22 ಕೋಟಿ ರೂಪಾಯಿ ಸಾಲ ನೀಡಿ ಒಟ್ಟು 137.74 ಕೋಟಿ ರೂ. ವ್ಯವಹಾರ ನಡೆಸಿದೆ. 45.23 ಕೋಟಿ ರೂಪಾಯಿ ದುಡಿಯುವ ಬಂಡವಾಳದಿಂದ 84.71 ಲಕ್ಷ ರೂಪಾಯಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 20 ಡಿವಿಡೆಂಡ್ ಘೋಷಿಸಿದೆ.

ಸಂಘದ ಪ್ರಭಾರ ಮುಖ್ಯ ನಿರ್ವಹಣಾಧಿಕಾರಿ ಶ್ರೀ ಬಿ.ನಾಗರಾಜ ರಾವ್ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷ ಶ್ರೀ ಶೇಖಬ್ಬ, ನಿರ್ದೇಶಕರುಗಳಾದ ಶ್ರೀ ಶೀನ ಕೋಟ್ಯಾನ್, ಶ್ರೀ ಸಚಿನ್ ಕುಮಾರ್, ಶ್ರೀ ನಾಗೇಶ್.ಕೆ, ಶ್ರೀ ರಾಜು, ಶ್ರೀ ಸದಾಶಿವ ಶೆಟ್ಟಿ, ಶ್ರೀ ನರೇಶ್ ಕುಮಾರ್, ಶ್ರೀಮತಿ ನಳಿನಾಕ್ಷಿ, ಶ್ರೀಮತಿ ರೀತಾ.ಸಿ.ಸುವರ್ಣ, ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಶ್ರೀ ಸಂಜಯ ಅತಿಕಾರಿ ಉಪಸ್ಥಿತರಿದ್ದರು.
ಶ್ರೀ ಕಮಲಾಕ್ಷ.ಎನ್.ಜಿ. ಕಾರ್ಯಕ್ರಮ ನಿರೂಪಿಸಿ, ಶ್ರೀ ನಾಗೇಶ್.ಕೆ. ವಂದನಾರ್ಪಣೆ ಗೈದರು.
