ಮೂಡಬಿದಿರೆ: ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಸುಮಾರು 50 ವರ್ಷಗಳ ಕಾಲ ಪಿಗ್ಮಿ ಸಂಗ್ರಾಹಕರಾಗಿದ್ದ ಮೂಡಬಿದಿರೆ ಒಂಟಿಕಟ್ಟೆ ನಿವಾಸಿ ಎಂ. ಶ್ರೀಧರ್ (67) ಸೆ. 22ರಂದು ನಿಧನ ಹೊಂದಿದರು. ಪತ್ನಿ ಮೂವರು ಪುತ್ರರು, ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ. ಹೋಟೆಲ್ ಉದ್ಯಮಿಯಾಗಿ ಮೂರು ದಶಕಗಳ ಕಾಲ ಜನಪ್ರಿಯ ಹೋಟೆಲ್‍ನ್ನು ನಡೆಸಿದ್ದ ಶ್ರೀಧರ್, ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಒಂಟಿಕಟ್ಟೆ ಸ್ನೇಹ ಯುವಕ ಮಂಡಲದ ಅಧ್ಯಕ್ಷರಾಗಿ ಮತ್ತು ಇತರ ಪದಾಧಿಕಾರಿಯಾಗಿ 25 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದರು. 
