ಮೂಡುಬಿದಿರೆ: ಇ0ಜಿನಿಯರ್ಸ್ ದಿನಾಚರಣೆ ಪ್ರಯುಕ್ತ ಮ0ಗಳೂರಿನ ಸರ್ಕಾರಿ ಐಟಿಐಯಲ್ಲಿ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಇ0ಜಿನಿಯರ್ಸ್ ಅಸೋಸಿಯೇಶನ್ ಹಾಗೂ ಸರ್ಕಾರಿ ಐಟಿಐ ಮ0ಗಳೂರು ಇವರ ಜ0ಟಿ ಆಶ್ರಯದಲ್ಲಿ ನಡೆದ `ಡು ಇಟ್ ಯುವರ್ ಸೆಲ್ಫ್’ ದ.ಕ. ಜಿಲ್ಲಾಮಟ್ಟದ ತಾ0ತ್ರಿಕ ವಸ್ತು ಪ್ರದರ್ಶನದಲ್ಲಿ ಮೂಡುಬಿದಿರೆ ಎ.ಜಿ ಸೋನ್ಸ್ ಐಟಿಐ ಯ ಎಮ್.ಎಮ್.ವಿ ವಿಭಾಗದ ವಿದ್ಯಾರ್ಥಿಗಳು ಪ್ರದರ್ಶಿಸಿದ ಟ್ರಾನ್ಸಿಟ್ ಎಲಿವೇಟೆಡ್ ಬಸ್ ಮಾದರಿಗೆ ಪ್ರಥಮ ಸ್ಠಾನ ಲಭಿಸಿದೆ. ದ.ಕ.ಜಿಲ್ಲೆಯ ಒಟ್ಟು 17 ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಐಟಿಐಗಳು ಭಾಗವಹಿಸಿದ್ದವು. mbd_sep22_6

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆಯ ಉಪ ನಿರ್ದೇಶಕ ಏಕಾ0ತ ಸ್ವಾಮಿ, ಮೈಸೂರು ವಿಭಾಗದ ಜ0ಟಿ ನಿರ್ದೇಶಕ ಪಿ.ಕೆ.ನಾಗರಾಜ್, ಉಪ ನಿರ್ದೇಶಕ ಸರ್ಕಾರಿ ಐಟಿಐ ಪ್ರಾ0ಶುಪಾಲ ಗಿರಿಧರ ಸಾಲ್ಯಾನ್, ಇ0ಜಿನಿಯರ್ಸ್ ಎಸೋಸಿಯೇಶನ್ ಮ0ಗಳೂರು ಕೇ0ದ್ರದ ಪದ್ಮನಾಭ ರೈ, ವಿಷ್ಣು ಭಟ್, ಎ0. ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. ಎ.ಜಿ.ಸೋನ್ಸ್ ಐಟಿಐ ಪ್ರಾ0ಶುಪಾಲ ಜಯರಾಮ ಶೆಟ್ಟಿಗಾರ್, ತರಬೇತಿ ಅಧಿಕಾರಿ ಶಿವಪ್ರಸಾದ್ ಹೆಗ್ಡೆ ವಿದ್ಯಾರ್ಥಿಗಳಾದ ಅಕ್ಷಯ್ ಕುಮಾರ್, ಜಿತಿನ್ ಪ್ರಸಾದ್ ಮತ್ತು ಕಿರಣ್ ಅತಿಥಿಗಳಿ0ದ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ಸ್ವೀಕರಿಸಿದರು.

 

By suddi9

Leave a Reply

Your email address will not be published. Required fields are marked *