ಬಂಟ್ವಾಳ : ತುಂಬೆ ಅಭಿಮಾನಿ ಬಳಗದ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ತುಂಬೆ ಪರಿಸರದಲ್ಲಿ ಸಜಿಪಮುನ್ನೂರು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಗಿಡ ನಡುವ ಮೂಲಕ ಚಾಲನೆ ನೀಡಿದರು.
ಅಧ್ಯಕ್ಷ ದೇವದಾಸ್ ಪರ್ಲಕ್ಕೆ , ಗೌರವಾಧ್ಯಕ್ಷ ಗೋಪಾಲ್ ಕೃಷ್ಣ ತುಂಬೆ , ಕಾರ್ಯದರ್ಶಿ ಕೆ.ಎಸ್.ಅಮೀರ್ ಅಹ್ಮದ್ ತುಂಬೆ, ಉಪಾಧ್ಯಕ್ಷ ಕಮಲ್ ವಳವೂರು, ಸಂಘಟನಾ ಕಾರ್ಯದರ್ಶಿ ಅಶೋಕ್ ಕೊಂಡಾಣ, ಉಮರಬ್ಬ, ಮೋನಪ್ಪ ಮಜಿ, ಗೌರವ ಸಲಹೆಗಾರ ಅರಮ್ ಉಚ್ಚಿಲ , ಉದ್ಯಮಿ ಕೆ.ಎಂ.ನಾಸಿರ್, ಧನಂಜಯ, ವಿಜೇತ ಗೋಮಯಿ ಹಾಗೂ ಬಳಗದ ಸದಸ್ಯರು ಉಪಸ್ಥಿತರಿದ್ದರು.


