ಸುದ್ದಿ ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ಕಂಡದಬೆಟ್ಟು ಸಾಣೂರು ಈ ಪ್ರದೇಶವನ್ನು ಕೂಡಿಸುವ ತುಂಬಾ ಹಳೆಯಾಗಿದ್ದು ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲಲ್ಲಿ ಹೊಂಡಗುಂಡಿಗಳಿಂದ ಕೂಡಿದ ಈ ರಸ್ತೆಯಲ್ಲಿ ವಾಹನ ಸಂಚಾರ ನಡೆಸಿ ಅಪಘಾಥ ಸಂಭವಿಸಿದರೆ ಖಂಡಿತಾ ಯಮಪುರಿಗೆ ಆರಾಮವಾಗಿ ಹೋಗಬಹುದು ಎಂದು ಹೇಳಿ ಸ್ಥಳೀಯರು ಭೀತರಾಗುತ್ತಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರಿಗೆ ಮನವಿ ಸಲ್ಲಿಸಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನವರು ಪತ್ರಿಕೆಗೆ ದೂರಿಕೊಂಡಿದ್ದಾರೆ.

18 vp sanoor raste

18 vp sanoor raste 1
ಈ ರಸ್ತೆ ನಿರ್ಮಾಣಗೊಂಡು   25 ವರ್ಷಗಳ ಮೇಲಾಗಿದೆ. ಆದರೆ ಅಂದಿನಿಂದ ಇಲ್ಲಿನವರೆಗೆ ಸರಕಾರದ ಯಾವುದೇ ಅನುದಾನ ದೊರೆತಿಲ್ಲ. ಇಲ್ಲಿನ ಮಕ್ಕಳು ಶಾಲೆಗೆ ಹೋಗಬೇಕಾದರೆ ಇದೇ ರಸ್ತೆಯಲ್ಲಿ 2ರಿಂದ 3 ಕಿ.ಮೀ. ನಡೆಯಬೇಕಾಗುತ್ತದೆ. ಈ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಾಗಿಲ್ಲ ಎಂದು ಸ್ಥಳೀಯರು ಅವಲತ್ತು ತೋಡಿಕೊಂಡಿದ್ದಾರೆ.
ಈ ರಸ್ತೆಯನ್ನು ಕೂಡಲೇ ರಿಪೇರಿಗೊಳಿಸಿ ಸಂಚಾರಮುಕ್ತ ರಸ್ತೆಯನ್ನಾಗಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ

By suddi9

Leave a Reply

Your email address will not be published. Required fields are marked *