ಬಂಟ್ವಾಳ:ತಾಲ್ಲೂಕಿನ ಅಲ್ಲಿಪಾದೆ ಸಮೀಪದ ಮರಾದೊಟ್ಟು ನಿವಾಸಿ ಶಂಕರ ಮೂಲ್ಯ (65) ಇವರು ಸ್ವಗೃಹದಲ್ಲಿ ಗುರುವಾರ ನಿಧನರಾದರು. ‘ಡ್ರೈವರ್ ಶಂಕರಣ್ಣೆ’ ಎಂದೇ ಪ್ರಸಿದ್ದರಾಗಿದ್ದ ಇವರಿಗೆ ಪತ್ನಿ , ಮೂವರು ಪುತ್ರರು ಮತ್ತು ಪುತ್ರಿ ಇದ್ದಾರೆ.
16btl-shankar-moolya
ಆರಂಭದಲ್ಲಿ ಮೆಕ್ಯಾನಿಕ್ ವೃತ್ತಿ ನಡೆಸುತ್ತಿದ್ದ ಇವರು ಬಳಿಕ ಕೃಷಿ, ತೋಟಗಾರಿಕೆ, ಜೊತೆಗೆ ಬಾಡಿಗೆಗೆ ಕಾರು ಚಲಾಯಿಸುತ್ತಿದ್ದರು. ವಾಹನ ಚಾಲನಾ ತರಬೇತುದಾರರಾಗಿದ್ದ ಇವರು ಗುತ್ತಿಗೆ ಆಧಾರದಲ್ಲಿ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಕಾರು ಚಾಲಕರಾಗಿಯೂ ದುಡಿಯುತ್ತಿದ್ದರು.

By Suddi9

Leave a Reply

Your email address will not be published. Required fields are marked *