ಕೈಕಂಬ: ಅನೇಕ ಸಮಾಜ ಸೇವಾ ಚಟುವಟಿಕೆಗಳೊಂದಿಗೆ ಗಮನ ಸೆಲೆಯುತ್ತಿರುವ ಮಂಗಳೂರು ತಾಲೂಕಿನ ಅಡ್ಡೂರು ಫೈ ಸ್ಟಾರ್ ಯುವಕರ ಸಂಘಟನೆ ರಸ್ತೆಯ ಗುಂಡಿಗಳನ್ನು ಶ್ರಮದಾನದ ಮೂಲಕ ಮುಚ್ಚಿ ಪಿಕಾಪ್ ವಾಹನದಲ್ಲಿ ಕಲ್ಲುಗಳನ್ನು ತಂದು ಹೊಂಡಗಳಿಗೆ ತುಂಬಿಸಿ ರಸ್ತೆಗಳ ಗುಂಡಿಗಳನ್ನು ಸರಿಪಡಿಸಿದ ಯುವಕರು ಸಾರ್ವಜನಿಕರು ಹಾಗೂ ವಾಹನ ಚಾಲಕರುಗಳ ಪ್ರಸಂಶೆಗೆ ಪಾತ್ರರಾದರು.

ಕೈಕಂಬ ಪೊಳಲಿ ದ್ವಾರದ ವಿವೇಕನಂದ ರಸ್ತೆಯ ಉದ್ದಕ್ಕೂ ಫೈ ಸ್ಟಾರ್ ಯುವಕರು ಶ್ರಮದಾನ ನಡೆಸಿದರು. ಅಸ್ರಪ್, ಪಾರೂಕ್, ಸಿರಾಜ್, ಫಜಲ್ , ಅಬೀಬ್, ನೌಶಾದ್, ಪರೀದ್ ಹಾಗೂ ಫೈಸ್ಟಾರ್ ಇದರ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
