ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಹಾಗೂ ಇನ್ನಿತರ ದೇವರನ್ನು ಫೇಸ್ ಬುಕ್ ನಲ್ಲಿ ಅವ್ಯಚ್ಚ ಶಬ್ಧದಲ್ಲಿ ನಿಂದಿಸಿ ಅಶ್ಲೀಲವಾಗಿ ಹೇಳಿಕೆಗಳನ್ನು ಪ್ರಕಟಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಬಂದರು ಪೊಲೀಸರು ವಶಕ್ಕೆ ಒರ್ವ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಬಂಧಿಸಿದಂತೆ ಚಿಕ್ಕಮಗಳೂರು ಕೊಪ್ಪದ ಹನೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು. ಇತರ ಪ್ರಕರಣದ ಆರೋಪಿಗಳ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದ್ದು, ಶೀಘ್ರ ಅವರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೂಲತಃ ಆರೋಪಿಗಳು ಕರಾವಳಿಯವರಾಗಿದ್ದು ವಿದೇಶದಲ್ಲಿ ನೆಲೆಸಿರುವ ಆರೋಪಿಗಳು ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಹಿಂದು ದೇವರು, ಧರ್ಮದ ಬಗ್ಗೆ ಅವಹೇಳನ ಮಾಡುತ್ತಿರುವುದು ಗೊತ್ತಾಗಿದೆ.
