ಉಡುಪಿ:ಸಂಪೂರ್ಣ ಹಳ್ಳಿ ಪ್ರದೇಶವಾದ ಪೆರ್ಣಂಕಿಲವು ಉಡುಪಿಯಿಂದ 20ಕಿ.ಮೀ ಆಗ್ನೇಯಕ್ಕೆ ಹಿರಿಯಡ್ಕದ ಓಂತಿಬೆಟ್ಟುವಿನಿಂದ 8 ಕಿ.ಮೀ ದೂರದಲ್ಲಿದೆ. ಈ ಊರಿನ ಪ್ರಸಿದ್ದಿಗೆ ಕಾರಣ ಇಲ್ಲಿರುವ ಉದ್ಭವ ಶ್ರಿ ಮಹಾಗಣಪತಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವಾಲಯಗಳು, ಈ ದೇವಾಲಯಗಳು ಹಲವು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ.
ಶಿವನ ತ್ರಿಕಾಲ ಪೂಜೆಮಾಡುತ್ತಿದ್ದಖರಾಸುರನುತಾನು ಸಂಚಾರಕ್ಕೆ ಹೋಗುವಾಗ ಪೂಜೆ ಮಾಡಲೆಂದು ಪ್ರತೀ ನಾಲ್ಕು ಕಿ.ಮೀ ಅಂತರದಲ್ಲಿ ಶಿವಲಿಂಗವನ್ನು ಪ್ರತಿಷ್ಠೆ ಮಾಡಿದನು, ಇಲ್ಲಿರುವ ಶಿವಾಲಯವನ್ನು ಖರಾಸುರನು ಪ್ರತಿಷ್ಠೆ ಮಾಡಿದ್ದೆಂದುಕಟ್ಟಿಂಗೇರಿ,ಕೊಂಡಾಡಿ, ಕಣಜಾರು, ಪರೀಕ ಇವೂ ಈತನಿಗೆ ಸಂಬಂಧಿಸಿದವು ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಶಿವ ದೇವಾಲಯಗಳೂ ಒಂದೇ ಶೈಲಿಯಲ್ಲಿ ನಿರ್ಮಾಣಗೊಂಡಿವೆಎಂಬುದನ್ನು ಗಮನಿಸಬಹುದು.ಇಲ್ಲಿರುವ ಶಿವ ದೇವಾಲಯವು ಆಳುಪರ ಕಾಲದಲ್ಲಿ ನಿರ್ಮಾಣವಾಗಿದ್ದು, ಆಳುಪರ ರಾಣಿ ಕಟ್ಟಿಸಿದಳು ಎಂದುಇಲ್ಲಿರುವ ಶಾಸನದಿಂದ ತಿಳಿದು ಬರುತ್ತದೆ.ಇದುವರೆಗೂ ಶಾಸನವನ್ನು ಸಂಪೂಣ್ವಾಗಿಓದಲು ಸಾದ್ಯವಾಗಿಲ್ಲ, ಸಾದ್ಯವಾದಲ್ಲಿದೇವಾಲಯದ ಬಗ್ಗೆ ಇನ್ನಷ್ಟು ಮಾಹಿತಿಗಳು ದೊರಕಬಹುದೆಂದು ಈ ಬಗ್ಗೆ ಅಧ್ಯಯನ ನಡೆಸಿದ ಇತಿಹಾಸತಜ್ಞರಾದ ಡಾ.ಪಿ.ಎನ್.ನರಸಿಂಹಮೂರ್ತಿಯವರು ಹೇಳುತ್ತಾರೆ.
ಇಲ್ಲಿನಗಣಪತಿಉದ್ಭವದೇವರು.ಸ್ವಯಂ ಭೂಗಣಪತಿದೊರಕಿದ್ದು ಪೆರ್ಣ ಎಂಬ ದಲಿತನತಂದೆಗೆ.ಪೆರ್ಣನುಚಿಕ್ಕ ಪ್ರಾಯದಲ್ಲಿಯೇಅಸುನೀಗಿದ್ದ.ಹಿಂದಿನ ಸಂಪ್ರದಾಯದಂತೆಆತನನ್ನುಗದ್ದೆಯಲ್ಲಿ ಹೂಳಲಾಗಿತ್ತು.ಮುಂದೆ ಕೆಲ ವರ್ಷಗಳ ನಂತರ ಈ ದಲಿತರೈತನುಗದ್ದೆಯನ್ನು ಉಳುವಾಗ ನೇಗಿಲು ಕಲ್ಲಿನಂತಹ ವಸ್ತುವಿಗೆ ತಾಗಿತು.ನೋಡುವಾಗರಕ್ತಮಯವಾಗಿತ್ತು. ಪೆರ್ಣಾ ಈ ನನಲ ಉಲ್ಲನಾ(ಪೆರ್ಣ ನೀ ಇನ್ನೂಜೀವಂತವಾಗಿದ್ದೀಯಾ) ಎಂದುಉದ್ಗಾರತೆಗೆದ. ಗಣಪತಿಗೆಆತನ ಹೆಸರನ್ನುಜೀವಂತವಾಗಿಸುವ ಆಸೆ ಇದ್ದಿರಬೆಕು.ಸರಿಯಾಗಿ ಗಮನಿಸಿದಾಗ ಗಣಪತಿಯ ವಿಗ್ರಹ, ತಲೆಯಒಂದು ಭಾಗ ನೆಗಿಲಿಗೆ ಸಿಲುಕಿ ಸೀಳಿ ಹೋಗಿತ್ತು.ದೇವರ ಮೂರ್ತಿಯಿಂದರಕ್ತ ಬರುತ್ತಿದೆ, ಇದೇನುತಪ್ಪು ಮಾಡಿದೆಎಂದು ಮರುಗುತ್ತಾನೆ. ಅದೇ ದಿನ ರಾತ್ರಿ ಕನಸಿನಲಲಿ ಒಂದುಕೊಪ್ಪರಿಗೆಯನ್ನು ನೇಗಿಲು ತಾಗಿದ ಸ್ಥಳದಲ್ಲಿ ಇನ್ನೊಂದನ್ನುಶಿವಾಲಯದ ಪಕ್ಕದಲ್ಲಿತಲೆ ಕೆಳಗೆ ಮಾಡಿಇಟ್ಟು ಮರುದಿನ ಬಂದು ನೋಡಲು ಸೂಚನೆಯಾಯಿತು.ಆ ದಲಿತ ಹಾಗೆ ಮಾಡಿ ಮರುದಿನ ಬಂದು ನೋಡಲು ವಿಗ್ರಹದೊರೆತ ಸ್ಥಳವು ಖಾಲಿಯಾಗಿತ್ತು ಹಾಗೂ ಶಿವಾ¯ಯದ ಪಕ್ಕದಲ್ಲಿದ್ದಕೊಪ್ಪರಿಗೆಯಲ್ಲಿ ವಿಗ್ರಹವಿತ್ತು.ಬಾವಿಯಲ್ಲಿ ವಿಗ್ರಹ ಸೃಷ್ಟಿಯಾಗಿ ಮೆಲ್ಭಾಗ ಮಾತ್ರತೋರುತ್ತಿತ್ತು.ನೇಗಿಲು ತಾಗಿ ವಿಗ್ರಹದೊರೆತ ಸ್ಥಳದಲ್ಲಿ ಗುರುತಿಗಾಗಿಕಲ್ಲನ್ನು ನೆಡಲಾಗಿದೆ.ಪ್ರತೀ ವರ್ಷರಥೋತ್ಸವದಂದುರಥವು ಈ ಕಲ್ಲಿನವರೆಗೆ ಸಾಗಿ, ಪೂಜೆ ಸಲ್ಲಿಸಿ ನಂತರ ಹಿಂದಿರುಗುತ್ತದೆ. ಈ ಘಟನೆಯು ನಂತರ ಈ ಊರು ಪೆರ್ಣ+ಅಂಕಿಲ(ನೇಗಿಲು) ಪೆರ್ಣಂಕಿಲವಾಯಿತು.ಜಾತಿಪದ್ದತಿಗಳು ಬಲಿಷ್ಟವಾಗಿದ್ದ ಆ ಕಾ¯ದಲ್ಲಿಊರಿಗೆ ಪೆಣ್ನ ಹೆಸರು ಬರುವಂತೆ, ಆ ದಲಿತನನ್ನುಅಜರಾಮರ ಮಾಡಿದ್ದು, ವಿಶೇಷ.
ಶಿವಾಲಯದ ನಂದಿ ವಿಗ್ರಹವನ್ನು 1963 ರಲ್ಲಿ ಸ್ಥಾಪಿಸಿದ್ದಾರೆ.ಶ್ರಿ ಮಹಾಲಿಂಗೇಶ್ವರದೇವಾಲಯದಎಡಭಾಗದಲ್ಲಿಗಣಪತಿ ಮೂಡಿ ಬಂದಿದ್ದು, ಈ ವಿಗ್ರಹದ ಕೆಳಗೆ ಬಾವಿ ಇದೆ. ವಿಶೇಷವೆಂದರೆ ಶಿವನು ಪೂರ್ವಕ್ಕೆ ಮುಖ ಮಾಡಿದ್ದರೆಗಣಪತಿ ಪಶ್ಚಿಮಕ್ಕೆ ಮುಖವಾಗಿಸಿದ್ದಾನೆ. ಎರಡೂ ದೇವಾಲಯಗಳೂ ಸುತ್ತಲೂ ಪರಿವಾರ ಗಣಗಳನ್ನು ಹೊಂದಿದೆ.ಆಗ್ನೆಯದಲ್ಲಿ ಭೂತರಾಜ, ರಕ್ತೇಶ್ವರಿ, ಈಶಾನ್ಯದಲ್ಲಿಕ್ಷೇತ್ರಪಾಲ, ದೇವಾಲಯದಎದುರಿನಲ್ಲಿರುವಕೆರೆ ಹಾಗೂ ನಾಗಬನಗಳೂ ಹಲವು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಮೊದಲು ಈ ಪರಿಸರದಲ್ಲಿ ಹರಿಜನರಕೃಷಿಯನ್ನು ಉದ್ಯೋಗವಾಗಿರಿಸಿ ವಾಸಿಸುತ್ತಿದ್ದರು.ಕ್ರಮೇಣ ಈ ಕ್ಷೇತ್ರವುಜೈನರಾಜರ ವಶವಾಯಿತೆಂದು ತಿಳಿದುಬರುತ್ತದೆ.
*ಗಣೇಶನ ಮಹಿಮೆ:
ಕಾಕ್ಳದಜೈನರರಾಜ ಭೈರವರಸನಕಾಲದಲ್ಲಿ ಪೆರ್ಣಂಕಿಲವು ಆತನ ವಶವಾಗಿತ್ತು, ಆತನ ಪರವಾಗಿಇಲ್ಲಿಯಓರ್ವಯುವಕದಂಡನಾಯಕನಾಗಿ ಈ ಕ್ಷೇತ್ರದ ಆಳ್ವಿಕೆ ನಡೆಸುತ್ತಿದ್ದ ಬಿಸಿ ರಕ್ತದಯುವಕ, ಅಧಿಕಾರದ ಮದದಿಂದದೇವರಇರುವಿಕೆಯನ್ನೇ ಪ್ರಶ್ನಿಸಿದ.ಗಣಪತಿದೇವಾಲಯದಲ್ಲಿ ಆಗ ದೇವರಿಗೆಅಪ್ಪಸೇವೆ ನಡೆಯುತ್ತಿತ್ತು.ಇಲ್ಲಿಯ ಬ್ರಾಹ್ಮಣರನ್ನು ಧಿಕ್ಕರಿಸಿ ಆತದೇವಾಲಯ ಪ್ರವೇಶಿಸಿದ.ಈ ಗಣಪತಿಅದೆಷ್ಟುತಿನ್ನುತ್ತಾನೋ ನೋಡುವಎಂದುಗಣಪತಿ ವಿಗ್ರಹವಿರುವಕೊಪ್ಪರಿಗೆತುಂಬಾಅಪ್ಪ ಸುರುವಿದ.ಅವೆಲ್ಲವನ್ನೂ ಮೀರಿಗಣಪತಿಯ ವಿಗ್ರಹಕಾಣುತ್ತಿತ್ತು.ಅಪ್ಪ ಸುರುವಿದಷ್ಟೂ ವಿಗ್ರಹ ಬೆಳೆಯುತ್ತಿತ್ತು.ಆತನ ಪ್ರಯತ್ನ ವಿಫಲವಾಯಿತು.ಆ ಕ್ಷಣದಲ್ಲಿಆತನಿಗೆಊರಿಗೆ ಶಾಪವಾಯಿತು.ಅಂದಿನಿಂದಆತನ ವಂಶದವರು ಈ ಊರಿನಿಂದ ಪಲಾಯನ ಮಾಡಿದರು.ಅಂದಿನಿಂದ ಈಗಲೂ ಗಣಪತಿಯ ವಿಗ್ರಹ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ ಎಂದು ಪ್ರತೀತಿಇದೆ.
ಈ ಕ್ಷೇತ್ರದಯಾವುದೇ ಮನೆಯಲ್ಲೂಗಣಪತಿಯ ಮೂರ್ತಿಯನ್ನು, ಗಣಹೋಮವನ್ನು ಮಾಡುವ ಹಾಗಿಲ್ಲ. ಏನಿದ್ದರೂ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಬೇಕು.ಇಂದಿನವರೆಗೂ ಈ ಕ್ರಮಇಲ್ಲಿ ನಡೆದು ಬಂದಿದೆ.ಇದುಅಂದು ಆ ದಂಡನಾಯಕ ಮಾಡಿದತಪ್ಪಿಗೆಇಡೀಊರಿಗೇ ಸಿಕ್ಕಿದ ಶಿಕ್ಷೆ ಎಂದುಇಲ್ಲಿನಊರವರ ನಂಬಿಕೆ.
*ಕೊಪ್ಪರಿಗೆಅಪ್ಪ:
ಪೆರ್ಣಂಕಿಲದಉದ್ಭವಗಣಪತಿಯು ಸಂತಾನಹೀನರಿಗೆ ಸಂತಾನಭಾಗ್ಯ, ಅವಿವಾಹಿತರಿಗೆ ವಿವಾಹ ಭಾಗ್ಯ, ಶಿಕ್ಷಣ-ಉದ್ಯೋಗ ಸಮಸ್ಯೆಗಳಿಗೆ ಪರಿಹಾರಒದಗಿಸುತ್ತಾನೆ ಎಂಬ ನಂಬಿಕೆ ಇದೆ.ತಮ್ಮಇಷ್ಟಾರ್ಥ ಸಿದ್ದಿಗಾಗಿ ಭಕ್ತರು ಸಲ್ಲಿಸುವಕೊಪ್ಪರಿಗೆಯಅಪ್ಪ ಸೇವೆ ಇಲ್ಲಿನ ಪ್ರಮುಖ ವಿಶೇಷ. ಅಕ್ಕಿ, ತೆಂಗಿನಕಾಯಿ, ಬೆಲ್ಲ, ತುಪ್ಪದಿಂದ ಮಾಡುವಅಪ್ಪಗಣೇಶನಿಗೆ ಬಲು ಪ್ರಿಯ.ಗಣೇಶಚತುರ್ಥಿಯಂದು ಸುಮಾರುಒಂದುಕ್ವಿಂಟಾಲ್‍ಅಕ್ಕಿಯಿಂದ ಸುಮಾರು 50000 ಕ್ಕೂ ಮಿಕ್ಕಿ ಅಪ್ಪಗಳನ್ನು ನೈವೇದ್ಯ ಮಾಡಿ ಭಕ್ತರಿಗೆ ಹಂಚುತ್ತಾರೆ.ಇಲ್ಲಿಯ ಸಂಪ್ರದಾಯದಂತೆಗ್ರೈಂಡರ್ ಬಳಸುವಂತಿಲ್ಲ. ಎಲ್ಲ ಅಪ್ಪಗಳೂ ಆದಿನ ಪ್ರಾತ ಕಾಲ 1 ಗಂಟೆಯ ಬಳಿಕವೇ ತಯಾರಾಗಬೇಕು.ತಿಂಗಳಿಗೆ ಸುಮಾರು 1 ಲಕ್ಷಅಪ್ಪದ ಸೇವೆ ನಡೆಯುತ್ತದೆ.ಇದುಕೊಪ್ಪರಿಗೆಅಪ್ಪಎಂದೇಪ್ರಸಿದ್ದ.ಈ ಅಪ್ಪ ಸೇವೆಯ ಪ್ರಾರಂಭಕ್ಕೆ ಕಾರಣಗಳು ತಿಳಿದು ಬಂದಿಲ್ಲ. ಈ ದೇವಾಲಯವು ಹಳ್ಳಿ ಪ್ರದೇಶದಲ್ಲಿದ್ದರೂ ಆಗಮಿಸುವ ಭಕ್ತರಿಗೆ ಶ್ರೀ ಪೇಜಾವರ ಮಠದಅನುದಾನದಲ್ಲಿ ನಿತ್ಯಅನ್ನದಾನದ ವ್ಯವಸ್ಥೆಇರುವುದುಇಲ್ಲಿನಇನ್ನೊಂದು ವಿಶೇಷ.
*ಯತಿಗಳ ಸಂಸ್ಪರ್ಶ:
ಉಡುಪಿಯಲ್ಲಿ ಅಷ್ಟಮಠಗಳ ಸ್ಥಾಪನೆಯ ನಂತರದಕ್ಷಿಣದ ಹಲವಾರು ದೇವಾಲಯಗಳು ಈ ಮಠದ ಆಳ್ವಿಕೆಗೆ ಒಳಗಾದವು.ಅದೇ ಸಮಯದಲ್ಲಿ ಪೆರ್ಣಂಕಿಲದಲ್ಲಿಜೈನರುತಮ್ಮ ಪ್ರಾಬಲ್ಯ ಕಳೆದುಕೊಂಡು ಪೂರ್ವದ ಕಾರ್ಕಳಕ್ಕೆ ಹೋದರು.ಬಳಿಕ ಈ ಎರಡೂ ದೇವಾಲಯಗಳೂ ಉಡುಪಿಯ ಮಠಗಳ ವ್ಯಾಪ್ತಿಗೆ ಸೇರಿತು.ಪ್ರಸ್ತುತ ಪೇಜಾವರ ಶ್ರಿ ವಿಶ್ವೇಶತೀರ್ಥ ಶ್ರೀಪಾದರ ಸಮರ್ಥ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.ಅಂದಿನಿಂದಲೂ ನಡೆದು ಬಂದ ಆಡಳಿತ, ಇದಕ್ಕೆಸಾಕ್ಷಿಯಾಗಿ ಶ್ರೀ ಪೇಜಾವರ ಮಠದಯತಿ ಪರಂಪರೆಗೆ ಸೇರಿದ 18-19 ನೇ ಶತಮಾನದಲ್ಲಿದ್ದ ಶ್ರೀ ವಿಶ್ವವರ್ಮತೀರ್ಥರು, ಶ್ರಿ ವಿಶ್ವರಾಜತೀರ್ಥರು, ಶ್ರಿ ವಿಶ್ವಮನೋಹರತೀರ್ಥರೆಂಬ ಮೂವರು ಯತಿಗಳ ವೃಂದಾವನಗಳಿವೆ. ಇವರು ಈಗಿನ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹಿಂದಿನ ಮೂವರು ಯತಿಗಳು.
ದೇವಾಲಯದ ಪಕ್ಕದಲ್ಲಿಯೇ ಪೇಜಾವರ ಮಠದ ಶಾಖೆ ಇದೆ.ಮೊದಲು ಈ ಸ್ಥಳದಲ್ಲಿ ನಾಗಬನವಿತ್ತು.ಅಂದಿನ ಸತ್ಯದಕಾಲದಲ್ಲಿ ಬನವನ್ನು ಬದಿಗೆ ನಿಲ್ಲಿಸಿ ಅಲ್ಲಿ ಮಠದ ಶಾಖೆ ತೆರೆದಿದೆಎನ್ನುತ್ತಾರೆ.ನಾಗಬನವೂ ಅದೆ ಸಮಿಪದಲ್ಲೇಇರುವುದನ್ನು ಗಮನಿಸಬಹುದು.
*ವಿಶೇಷ ದಿನಗಳು:
ಗಣೇಶಚತುರ್ಥಿಯಂದು ಸಹಸ್ರ ನಾರೀಕೆಳ ಯಾಗ, ಸಂಜೆ ಹೂವಿನ ಪೂಜೆ ನಡೆಯುತ್ತದೆ. ಮೀನ ಮಾಸದ ಹುಣ್ಣಿಮೆ ದಿನ ಧ್ವಜಾರೊಹಣವಾಗಿ ಬಿದಿಗೆಯಂದುರಥೋತ್ಸವ ನಡೆಯುತ್ತದೆ.ಸೋಮವಾರ ಶಿವನಿಗೆ ಪ್ರೀತ್ಯಾರ್ಥವಾಗಿದೇವಾಲಯದಲ್ಲಿ ಭಕ್ತರ ಸಂಖ್ಯೆ ಹೆಚ್ಚು ಕಂಡುಬರುತ್ತದೆ.ವಾರದಲ್ಲಿ ಮಂಗಳವಾರ ಸಂಕಷ್ಟಹರಚತುರ್ಥಿ ಬಂದರೆ ಭಕ್ರರ ಸಂಖ್ಯೆ ಇಮ್ಮಡಿಗೊಳ್ಳುತ್ತದೆ.ಗಣೇಶಚತುರ್ಥಿ ಮತ್ತುರಥೋತ್ಸವದಂದು ಸಹಸ್ರಾರು ಭಕ್ರು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುತ್ತಾರೆ.ನಿವೆಲ್ಲರೂಒಮ್ಮೆಯಾದರೂ ಈ ಕ್ಷೇತ್ರಕ್ಕೆ ಬಂದುದೇವರಅನುಗ್ರಹಕ್ಕೆ ಪಾತ್ರರಾಗಿರಿ.
ಶ್ರೀ ರಾಘವೇಂದ್ರ ಪ್ರಭು,ಕರ್ವಾಲು 9880811036


