ಬಜ್ಪೆ:  ಪಂಜಿಮೊಗರು ನಿವಾಸಿ ಜುಬೈರ್ ಎಂಬಾತನ ಮಗ ಗುರುಪುರ ಕೈಕಂಬದ ಸಮೀಪದ ಕಂದಾವರ ಎಂಬಲ್ಲಿನ ಕಲ್ಲಿನ ಕ್ವಾರಿಗೆ ಬಿದ್ದು ಮೃತಪಟ್ಟಿದ್ದಾನೆ. ಮೃತನನ್ನು ಬಜ್ಪೆ ಕಿನ್ನಿಪದವು ನಿವಾಸಿ ಸೈಫುಲ್ಲಾ(19) ಎಂದು ಗುರುತಿಸಲಾಗಿದೆ.
ಸೈಫುಲ್ಲಾ ಶನಿವಾರ ಇನ್ನಿಬ್ಬರೊಂದಿಗೆ ಸೇರಿಕೊಂಡು ಕಂದಾವರದಲ್ಲಿರುವ ಕಲ್ಲು ಕ್ವಾರಿಯಲ್ಲಿನ ಮೋಟಾರ್ ರಿಪೇರಿಗೆಂದು ಬಂದಿದ್ದ. ಆದರೆ ಸಂಜೆ ನಾಲ್ಕರ ವೇಳೆಗೆ ಮೋಟಾರ್ ರಿಪೇರಿ ಮಾಡುತ್ತಿದ್ದಂತೆ ಸೈಫುಲ್ಲಾ ಕಾಲು ಜಾರಿ ಕ್ವಾರಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *