ಕೈ ಕಂಬ.30 ಮಂಗಳವಾರದಂದು  ದಿಶಾ ಟ್ರಸ್ಟ್ (ರಿ) ಕೈಕಂಬ ಇಲ್ಲಿ ತೋಟಗಾರಿಕಾ ಇಲಾಖೆ ಜಿಲ್ಲಾ ಪಂಚಾಯತ್ ಮಂಗಳೂರು ಹಾಗೂ ದಿಶಾ ಟ್ರಸ್ಟ್ (ರಿ) ಕೈಕಂಬ ಇವರ ಸಹಭಾಗಿತ್ವದಲ್ಲಿ ಜರುಗಿದ ತೋಟಗಾರಿಕಾ ಬೆಳೆಗಳಲ್ಲಿ ಸಸ್ಯಸಂರಕ್ಷಣೆ ಹಾಗೂ ಇಲಾಖಾ ಕಾರ್ಯಕ್ರಮಗಳ ಬಗ್ಗೆ ತರಭೇತಿ ಕಾರ್ಯಕ್ರಮವನ್ನು  ತಾಲೂಕು ಪಂಚಾಯತ್ ಸದಸ್ಯರು ಕಂದಾವರ ಕೊಳಂಬೆ ಕ್ಷೇತ್ರ ವಿಶ್ವನಾಥ ಶೆಟ್ಟಿ,  ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಿದರು. ಅಧ್ಯಕ್ಷರು ಗ್ರಾಮ ಪಂಚಾಯತ್ ಕಂದಾವರ  ವಿಜಯ ಗೋಪಾಲ ಸುವರ್ಣ, ಇವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ದೇವೇಂದ್ರ ಉಪಾಧ್ಯಕ್ಷರು ಕಂದಾವರ ಪಂಚಾಯತ್, ಸಿಲ್ವೆಸ್ಟರ್ ಡಿ ಸೋಜ ನಿರ್ದೇಶಕರು ದಿಶಾ ಟ್ರಸ್ಟ್, ಸುಕುಮಾರ್ ಹೆಗ್ಡೆ ಸಹಾಯಕ ತೋಟಗಾರಿಕಾ ಅಧಿಕಾರಿ,  ಬಾಲಕೃಷ್ಣ ಭಟ್, ಹೆನ್ರಿ ವಾಲ್ಡರ್ ಸಂಯೋಜಕರು ದಿಶಾ ಟ್ರಸ್ಟ್ (ರಿ), ನೇಸರ ಕೇಂದ್ರೀಯ ಸಮನ್ವಯ ಸಮಿತಿ ಅಧ್ಯಕ್ಷರಾದ ನೋಬರ್ಟ್ ಸಿಕ್ವೇರಾ, ಸ್ಪಂದನ ಒಕ್ಕೂಟದ ಅಧ್ಯಕ್ಷರು  ಅನುಸೂಯ ಕಾಜವ ಗುರುಪುರ ಪಂಚಾಯತ್ ಅಧ್ಯಕ್ಷರು  ರುಕೀಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

20160830_111234

20160830_115459
ವಿಶ್ವನಾಥ ಶೆಟ್ಟಿ ತಾಲೂಕು ಪಂಚಾಯತ್ ಸದಸ್ಯರು ತಮ್ಮ ಉದ್ಘಾಟನಾ ಭಾಷಣದಲ್ಲಿ ಕೃಷಿಕರು ಮತ್ತು ಅಧಿಕಾರಿಗಳು ಉತ್ತಮ ಭಾಂದವ್ಯದಲ್ಲಿ ಇರಬೇಕೆಂದು, ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸ ಬೇಕೆಂದೂ ತಿಳಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರು ಅಧ್ಯಕ್ಷತೆ ನೆಲೆಯಲ್ಲಿ ಕೃಷಿಕರು, ಇಲಾಖೆಯಿಂದ ದೊರೆಯುವ ಸೌಲತ್ತುಗಳನ್ನು ಸದುಪಯೋಗ ಪಡೆಯುವಂತೆ ತಿಳಿಸಿದರು.
ಶ್ರೀ ಹೆನ್ರಿ ವಾಲ್ಡರ್ ದಿಶಾ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ವಿವರಿಸಿದರು. ಸುಕುಮಾರ್ ಹೆಗ್ಡೆ ತಾಂತ್ರಿಕ ಮಾಹಿತಿ ನೀಡಿದರು.ತರಬೇತಿ ಶಿಭಿರಾರ್ಥಿಗಳಿಂದ ಹಾಗೂ ಇಲಾಖಾ ಕಾರ್ಯಕ್ರಮದ ಬಗ್ಗೆ ಮಾಹಿತಿ ಪ್ರಶ್ನೋತ್ತರ ಹಾಗೂ ಅನಿಸಿಕೆಯನ್ನು ದಾಖಲಿಸಲಾಯಿತು. ತೋಟಗಾರಿಕಾ ಯೋಜನೆಗಳ ಬಗ್ಗೆ ಅರ್ಜಿಗಳನ್ನು ಸ್ವೀಕರಿಸಲಾಯಿತು.  ಬಾಲಕೃಷ್ಣ ಭಟ್ ಮಾಹಿತಿ ನೀಡಿದರು. ಹರಿಣಾಕ್ಷಿ ದಿಶಾ ಟ್ರಸ್ಟ್ ನ ಕಾರ್ಯಕರ್ತೆ ಎಲ್ಲರನ್ನು ಸ್ವಾಗತಿಸಿ ಕುಮಾರಿ ಮೋಹಿನಿ ವಂದಿಸಿದರು. ತರಬೇತಿ ಕಾರ್ಯಕ್ರಮವನ್ನು  ಸುಮಂಗಳರವರು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *