ಕೈಕಂಬ :ದ.ಕಜಿ.ಪ.ಹಿ.ಪ್ರಾ.ಶಾಲೆ ಕಲ್ಲಾಡಿ ಇಲ್ಲಿ ಸುಮಾರು 10 ವರ್ಷಗಳ ಕಾಲ ಮುಖ್ಯೋಪಾದ್ಯಾಯರಾಗಿ ಸೇವೆಸಲ್ಲಿಸಿ ಕಳೆದ ತಿಂಗಳು ನಿವೃತ್ತರಾದ ಶ್ರೀನಿವಾಸ ಎಂ.ರವರನ್ನು ಬೀಳ್ಕೊಡುವ ಸಮಾರಂಭವು ಅ.23 ಮಂಗಳವಾರ ಶಾಲಾ ಹಾಲ್ನಲ್ಲಿ ಜರುಗಿತು. ಸಭಾಧ್ಯಕ್ಷತೆಯನ್ನು ಕುಪ್ಪೆಪದವು ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯರಾದ ನಾಗೇಶ್ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷ ಡಿ.ಪಿ ಹಮ್ಮಬ್ಬ, ಸದಸ್ಯರಾದ ಮೊಹಮ್ಮದ್ ಶರೀಫ್, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಬ್ದುಲ್ ಮಜೀದ್, ಉಪಾಧ್ಯಕ್ಷೆ ಜಲಜ , ಮಾಜಿ ತಾ.ಪಂ. ಸದಸ್ಯರಾದ ಆರ್.ಕೆ ಪ್ರಥ್ವಿರಾಜ್, ನಿವೃತ್ತ ಗ್ರಾಮ ಕರಣಿಕ ರುಕುಮನಾೈಕ್, ಸರಕಾರಿ ಪ್ರೌಢಶಾಲೆ ಕಲ್ಲಾಡಿ ಇಲ್ಲಿಯ ಮುಖ್ಯೋಪಾಧ್ಯಾಯಿನಿ ಸುರೇಖ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುನೀತ್ ಕುಮಾರ್, ಎಸ್.ಡಿ.ಎಮ್.ಸಿ ಅಧ್ಯಕ್ಷರುಗಳಾದ ಪಿ.ಎಮ್ ಸಂಶುದ್ದೀನ್, ಜಗದೀಶ್ ಭಂಡಾರಿ, ಅಂಗನವಾಡಿ ಕಾರ್ಯದರ್ಶಿ ಸಬೀನಾಬಾನು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಊರನಾಗರಿಕರ ಹಾಗೂ ಎಸ್.ಡಿ.ಎಮ್.ಸಿ ಪರವಾಗಿ ಸನ್ಮಾನಿತರನ್ನು ಚಿನ್ನದ ಉಂಗುರ ಶಾಲುಹೊದಿಸಿ ಪೇಟಧರಿಸಿ ಫಲಪುಷ್ಪ ನೀಡಿ ಸಮ್ಮಾನಿಸಲಾಯಿತು.ಶ್ರೀನಿವಾಸ್ ಮಾತಾನಾಡಿ ನನ್ನ 38 ವರ್ಷದ ಸೇವೆಯಲ್ಲಿ ಕಲ್ಲಾಡಿಯಲ್ಲಿ ಕಳೆದ 10ವರ್ಷವು ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಈ ಊರಿನ ಜನರು ಜನಪ್ರತಿನಿಧಿಗಳು ನನ್ನೊಟ್ಟಿಗೆ ಕೈಜೋಡಿಸಿ ಶಾಲೆ ಉಳಿವಿಗೆ ಸಹಕರಿಸಿದ್ದಾರೆ ಎಂದರು. ಗ್ರಾ.ಪಂ.ಸದಸ್ಯ ಬಿ.ಎ.ಅಬೂಬಕ್ಕರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾದ್ಯಾಯಿನಿ ಮೋಹಿನಿ ವಂದಿಸಿದರು.
