ಬಂಟ್ವಾಳ: ಇಲ್ಲಿನ ಪುದು ಗ್ರಾಮಪಂಚಾಯಿತಿ ವ್ಯಾಪ್ತಿಯ ಸುಜೀರು ಬದಿಗುಡ್ಡೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ಶುಕ್ರವಾರ ನಡೆಯಿತು. ಸ್ಥಳೀಯ ಧಾರ್ಮಿಕ ಮುಂದಾಳು ಚಂದ್ರಶೇಖರ ಗಾಂಭೀರ ಉದ್ಘಾಟಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಈ ಹಿಂದೆ ಅಂಗನವಾಡಿ ಕಾರ್ಯಕತೆರ್ಯರು ಅಲ್ಪ ವೇತನಕ್ಕೆ ದುಡಿಯಬೇಕಾದ ಪರಿಸ್ಥಿತಿ ಇತ್ತು.BTW_AUG26_7

222

ಇತ್ತೀಚಿನ ದಿನಗಳಲ್ಲಿ ಹಲವಾರು ಸುಧಾರಣ ಕ್ರಮಗಳಿಂದಾಗಿ ಅವರ ಜೀವನದಲ್ಲೂ ಆಶಾದಾಯಕ ಕ್ಷಣಗಳು ಬಂದಿದೆ ಎಂದರು. ಜಿ.ಪಂ.ಮಾಜಿ ಸದಸ್ಯೆ ಜಯಶ್ರೀ ಕೆ.ಎ. ಪುದುಗ್ರಾಮಪಂಚಾಯಿತಿ ಉಪಾದ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯರಾದ ಮನೋಜ್ ಆಚಾರ್ಯ ನಾಣ್ಯ, ಗಣೇಶ್ ದತ್ತನಗರ, ರಮ್ಲಾನ್, ಮಾಲತಿ ಶೆಟ್ಟಿ, ಜಾನಕಿ, ಸೈಯ್ಯದ್, ಪ್ರವೀಣ್ ಕುಮಾರ್ ಶೆಟ್ಟಿ, ಹಾಗೂ ಗುತ್ತಿಗೆದಾರ  ಯಶೋಧರ ಮತ್ತಿತರರು ಹಾಜರಿದ್ದರು.

ಜಯಶ್ರೀ ಕೆ.ಎ. ಜಿ.ಪಂ.ನಿಧಿಯಿಂದ 2.83ಲಕ್ಷ, ರವೀಂದ್ರಕಂಬಳಿ ಜಿ.ಪಂ.ನಿಧಿಯಿಂದ 1 ಲಕ್ಷ ಹಾಗೂ ಆಸೀಫ್ ಇಕ್ಬಾಲ್ ತಾ.ಪಂ.ನಿಧಿಯಿಂದ 1.30 ಲಕ್ಷ ಅನುದಾನವನ್ನು ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಒದಗಿಸಿದ್ದರು. 

By suddi9

Leave a Reply

Your email address will not be published. Required fields are marked *