ಮೂಡುಬಿದಿರೆ: ಮೂಡುಬಿದಿರೆ ಈಜುಕೊಳದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ28 ಈಜು ತರಬೇತುದಾರರಿಗೆ ಏಳು ದಿನಗಳ ಕಾಲ ನಡೆಯುವ ತರಬೇತಿ ಕಾರ್ಯಕ್ರಮವನ್ನು ಮಾಜಿ ಸಚಿವ ಶಾಸಕ, ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಮಂಗಳವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಒಲಿಂಪಿಕನ್ನು ಗುರಿಯಾಗಿಟ್ಟುಕೊಂಡು ಮೂಡುಬಿದಿರೆಯಲ್ಲಿ ಈಜು ತರಬೇತುದಾರರಿಗೆ ತರಬೇತಿ ನೀಡಲಾಗುತ್ತಿದ್ದು ಚಿನ್ನ ಅಥವಾ ಬೆಳ್ಳಿ ಪದಕ ಪಡೆಯುವ ಕರ್ನಾಟಕದ ಗುರಿಹೊಂದಿದ್ದು ಹೊಸ ಈಜುಗಾರರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲಾಗುವುದು ಎಂದರು. ಕಾರ್ಕಳದಲ್ಲಿ ಈಜುಕೊಳ ನಿರ್ಮಿಸಲು 45ಲಕ್ಷ ಬಿಡುಗಡೆಗೊಳಿಸಿದ್ದೇನೆ. ಮಂಗಳೂರಿನಲ್ಲಿಯೂ 5.50ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಾಣವಾಗಲಿದೆ. ಮಂಗಳೂರಿನಲ್ಲಿರುವ ಕ್ರೀಡಾ ಹಾಸ್ಟೇಲ್ಗೆ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಆಸ್ಟ್ಸ್ವಿಮ್ನ ಮುಖ್ಯ ತರಬೇತುದಾರ ಪಾರ್ಥ ವಾರಣಾಸಿ ಮಾತನಾಡಿ, ಆಸ್ಟ್ರೇಲಿಯಾದಲ್ಲಿ ಕ್ರೀಡೆಗೆ ಸಂಬಂದಿಸಿದ ಪ್ರತ್ಯೇಕ ಕೌನ್ಸಿಲ್ ಭಾರತದಲ್ಲಿ 2014ರಲ್ಲಿ ಆರಂಬಿಸಿದ್ದು ಈ ವಗರೆಗೆ 300ಕ್ಕೂ ಅಧಿಕ ಈಜುಗಾರರಿಗೆ ತರಬೇತಿ ನೀಡಲಾಗಿದೆ. ಪುತ್ತೂರಿನಲ್ಲಿ ಆಸ್ಟ್ಸ್ವಿಮ್ನ್ನು ಆರಂಬಿಸಿ ಅದರಂತೆ ತರಬೇತಿ ನೀಡುತ್ತಿರುವುದರಿಂದ ಉತ್ತಮ ಈಜುಪಟುಗಳು ರೂಪುಗೊಳ್ಳುತ್ತಿದ್ದಾರೆ.ಡಬ್ಲ್ಯೂ ಎಚ್ ಒ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ವಾರ್ಷಿಕ 1 ಲಕ್ಷಕ್ಕೂ ಅಧಿಕ ಮಂದಿ ನೀರಿನಲ್ಲಿ ಮುಳುಗಿ ಸಾಯುತ್ತಿದ್ದಾರೆ. ಈಜು ಜೀವರಕ್ಷಕ ಕಲೆಯೂ ಆಗಿದೆ ಎಂದರು.
ಕಾರ್ಯಕ್ರಮದ ಸಂಯೋಜಕ ಸಮ್ಮಿತ್ರ, ಮೂಡುಬಿದಿರೆ ಪುರಸಭಾ ಸದಸ್ಯ ಪಿ.ಕೆ ಥೋಮಸ್ ವೇದಿಕೆಯಲ್ಲಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

