ಬಂಟ್ವಾಳ:ಇಲ್ಲಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಸಂಜೆ ಸಮಾರೋಪಗೊಂಡ ತಾಲೂಕು ಮಟ್ಟದ ಕೊಕ್ಕೊ ಪಂದ್ಯಾಟದಲ್ಲಿ ಕೊಡ್ಮಾಣ್ ಸರ್ಕಾರಿ ಪ್ರೌಢಶಾಲೆ ಬಾಲಕರ ತಂಡ ಮತ್ತು ಬೋಳಂತಿಮೊಗರು ಸರ್ಕಾರಿ ಪ್ರೌಢಶಾಲೆ ಬಾಲಕಿಯರ ತಂಡವು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದೆ. ಇಲ್ಲಿನ ನೈನಾಡು ಸರ್ಕಾರಿ ಪ್ರೌಢಶಾಲೆ ಬಾಲಕರು ಮತ್ತು ಬಾಲಕಿಯರ ತಂಡವು ಅನುಕ್ರಮವಾಗಿ ದ್ವಿತೀಯ ಸ್ಥಾನ ಗೆದ್ದುಕೊಂಡಿದೆ.
ತಾಲೂಕಿನ ಒಟ್ಟು ಎಂಟು ಬಾಲಕರ ತಂಡ ಮತ್ತು ಆರು ಬಾಲಕಿಯರ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದು, ಈ ಪಕಿ ಸುಹಾಸ್ ನೈನಾಡು, ಸುಕೇಶ್ ಕೊಡ್ಮಾಣ್, ಶಿವಪ್ರಸಾದ್ ಕೊಡ್ಮಾಣ್, ಫಾತಿಮಾ ನೌಶಿರ್ ಬೋಳಂತಿಮೊಗರು, ರೆನಿಟಾ ನೈನಾಡು, ಹೇಮಾ ಬೋಳಂತಿಮೊಗರು ಇವರಿಗೆ ವೈಯಕ್ತಿಕ ಸಾಧನೆಗಾಗಿ ಸ್ಥಳೀಯ ಉದ್ಯಮಿ ಹರೀಂದ್ರ ಪೈ ಅವರು ಟ್ರೋಫಿ ಬಹುಮಾನ ವಿತರಿಸಿದರು.

20btl-Nainadu

ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಇವರು ಮಾತನಾಡಿ, ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ಮತ್ತು ತರಭೇತಿ ಅಗತ್ಯವಿದೆ ಎಂದರು. ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ, ಸದಸ್ಯರಾದ ನಾಗೇಶ್, ನೈನಾಡು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕುಮಾರ್, ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಇನಾಸ್ ರಾಡ್ರಿಗಸ್, ಸದಸ್ಯರಾದ ಪ್ರಮೀಳ, ಹರೀಶ ಶೆಟ್ಟಿ, ಹರೀಶ ಪೂಜಾರಿ, ಉಪನ್ಯಾಸಕ ಪ್ರದೀಪ್ ಮೂಡುಬಿದ್ರೆ, ರಿಕ್ಷಾ ಚಾಲಕರ ಸಂಘದ ಉಪಾಧ್ಯಕ್ಷ ಮಿಥುನ್ ಪ್ರಭು ಮತ್ತಿತರರು ಬಹುಮಾನ ವಿತರಿಸಿದರು.
ದೈಹಿಕ ಶಿಕ್ಷಕ ವಾಸು, ಶಿಕ್ಷಕಿಯರಾದ ರಮಾ ಮೋಹನ್, ಸೌಮ್ಯಾ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಅಶೋಕ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಪ್ರಕಾಶ ನಾಯ್ಕ್ ವಂದಿಸಿದರು. ಹೇಮಣ್ಣ ನಿಂಬಣ್ಣನವರ್ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನೆ:ಶುಕ್ರವಾರ ಬೆಳಿಗ್ಗೆ ಆರಂಭಗೊಂಡ ಪಂದ್ಯಾಟವನ್ನು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸ್ಥಳೀಯ ಚಚಿನ ಧರ್ಮಗುರು ಫೆಡ್ರಿಕ್ ಮೊಂತೆರೊ, ಕಬಡ್ಡಿ ಆಟಗಾರ ಸೀತಾರಾಮ ಹೆಗ್ಡೆ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *