ಕಲ್ಲಡ್ಕ : ತಾಲೂಕಿನ ಗೋಳ್ತಮಜಲು, ಅಮ್ಟೂರು, ವೀರಕಂಬ, ಬಾಳ್ತಿಲ, ಶಂಭೂರು, ನರಿಕೊಂಬು, ಪಾಣೆಮಂಗಳೂರು ಗ್ರಾಮ ವ್ಯಾಪ್ತಿಯ ಕಲ್ಲಡ್ಕ ವಲಯ ಬಂಟರ ಸಂಘದ ವತಿಯಿಂದ ಮೂರನೇ ವರ್ಷದ ಆಟಿಡೊಂಜಿ ಕೂಟ ಕಾರ್ಯಕ್ರಮ ಭಾನುವಾರ ಶಂಭೂರು ಶೇಡಿಗುರಿಯ ಬೊಂಡಾಲ ದಿ. ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಶಂಭೂರು ಪ್ರೌಢಶಾಲೆಯ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಮಾತನಾಡಿ ಬಂಟ ಸಮುದಾಯದವರು ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಗುಣ ಉಳ್ಳವರು. ಸಮಾಜದ ವಿವಿಧ ಸ್ತರಗಳಲ್ಲಿ ಅನೇಕ ಮಂದಿ ಸಾಧಕರಿದ್ದರೆ ಅವರಲ್ಲಿ ಬಹುತೇಕರು ಬಂಟ ಸಮುದಾಯಕ್ಕೆ ಸೇರಿದವರು ಎಂದರು. ಬಂಟ್ವಾಳ ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಲೋಕನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದಿನ ದಿನಗಳನ್ನು ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ಆಟಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಹಿಂದಿನವರ ಕಷ್ಟದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಮುಮದಿನ ತಲೆಮಾರಿಗೂ ತಿಳಿಸುವಕೊಡುವ ಪ್ರಯತ್ನ ಇಂತಹ ಕಾರ್ಯಕ್ರಮಗಳಿಂದ ಆಗಬೇಕಿದೆ ಎಂದರು.
KAR_0476

KAR_0469
ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಮಾತನಾಡಿ ತಾಲೂಕು ಬಂಟರ ಭವನ ಉದ್ಘಾಟನೆಯ ಸಂಭ್ರಮದಲ್ಲಿದ್ದು ಎಲ್ಲರೂ ಸಹಕಾರ ನೀಡಿ ಒಂದೊಂದು ಜವಬ್ದಾರಿಗಳನ್ನು ವಹಿಸಿಕೊಳ್ಳುವಂತೆ ಮನವಿ ಮಾಡಿದರು. ಕಲ್ಲಡ್ಕ ವಲಯದ ಅಧ್ಯಕ್ಷ ಪದ್ಮನಾಭ ರೈ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ದ.ಕ. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರತಿಭಾ ಎ.ರೈ, ಬಂಟ್ವಾಳ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಮೃಣಾಲಿನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದಾಸಪ್ಪ ರೈ ದಾಸಕೋಡಿ, ಗಿರಿಧರ ರೈ, ಶ್ರೀನಿವಾಸ ಶೆಟ್ಟಿ, ನಾರಾಯಣ ರೈ, ಸೇಸಮ್ಮ ಮಾಣಾೈ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರತೀಕ್ಷಾ, ಪೂರ್ವಿ ರೈ, ಶೃತಿ ಶೆಟ್ಟಿ, ಅಪೇಕ್ಷಾ ಪಿ.ಶೆಟ್ಟಿ ಅಂತರ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷ ಕೆ.ಪದ್ಮನಾಭ ರೈ ಸ್ವಾಗತಿಸಿದರು. ನಾಗೇಶ್ ಶೆಟ್ಟಿ ಬೊಂಡಾಲ ವಂದಿಸಿದರು. ಶಿಕ್ಷಕ ಜಗದೀಶ ರೈ ಕಾರ್ಯಕ್ರಮ ನಿರೂಪಿಸಿದರು. ಆಟಿಕೂಟದ ಅಂಗವಾಗಿ ವಿವಿಧ ಬಗೆಯ ತಿಂಡಿ ತಿನಿಸುಗಳು ಮಧ್ಯಾಹ್ನದ ಭೋಜನದಲ್ಲಿ ಗಮನ ಸೆಳದವು, ಸ್ವಜಾತಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *