ಬಂಟ್ವಾಳ: ಇನ್ಪೋಸಿಸ್ ಸಂಸ್ಥೆಯು ಬಿಆರ್‍ಸಿ ಕೇಂದ್ರ ಬಳಿಯಲ್ಲಿ ವಿಕಲಚೇತನ ಮಕ್ಕಳಿಗಾಗಿ ಫಿಸಿಯೋಥೆರಫಿ ಚಿಕಿತ್ಸೆಗಾಗಿ ಮತ್ತು ಪಾಲನೆ  ಪೋಷಣೆಯ ಉತ್ತಮ ಸೌಲಭ್ಯದ ಕಟ್ಟಡ ನಿರ್ಮಿಸಲು ಅನುದಾನದ ಬಗ್ಗೆ ಯೋಜನೆ ರೂಪಿಸಿ ಈಗಾಗಲೇ ಜಮೀನು ಸರ್ವೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಆ. 13ರಂದು ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ವಿಕಲಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ ಉದ್ಘಾಟಿಸಿ ಮಾತನಾಡಿದರು. 1308bteph12

ಸರಕಾರದ ಯಾವುದೇ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಸಂಸ್ಥೆಗಳ ಸಹಭಾಗಿತ್ವ ಹೆಚ್ಚು ಪ್ರಾಮುಖ್ಯ ವಹಿಸುತ್ತದೆ. ವಿಕಲಚೇತನ ಮಕ್ಕಳಿಗಾಗಿ ಇರುವಂತಹ ಅದೆಷ್ಟೋ ಸಲವತ್ತುಗಳನ್ನು ಸಂಘಸಂಸ್ಥೆಗಳು ಮುತುವರ್ಜಿಯಿಂದ ಮುಟ್ಟಿಸುವ ಕೆಲಸ ಮಾಡಬೇಕು. . ಲಯನ್ಸ್ ಸಂಸ್ಥೆಯು ಉತ್ತಮ ಕೆಲಸ ಮಾಡುತ್ತಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ ಸರಕಾರಿ ಯೋಜನೆಯಲ್ಲಿ, ಉದ್ಯೋಗದಲ್ಲಿ, ಪರಿಹಾರ ವಿತರಣೆಯಲ್ಲಿ ವಿಕಲ ಚೇತನರಿಗೆ ಅನುಕಂಪಕ್ಕಿಂತ ಹೆಚ್ಚು ಅವಕಾಶ ನೀಡುವುದು ಅವಶ್ಯವಾಗಿದೆ. ಅವರ ಬದುಕು ಹಸನಾಗಲು ಸಾಮಾಜಿಕ  ಪ್ರೋತ್ಸಾಹ ,ಬೆಂಬಲ ನೀಡಿದಾಗ ನಮಗೆ ದೇವರ ಕೃಪೆ ಆಗುವುದು ಎಂದು ಹೇಳಿದರು.
.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಮಾತನಾಡಿ ವಿಕಲ ಚೇತನರ ಪರವಾಗಿ ಕೆಲಸ ಮಾಡುವವರೇ ಇಲ್ಲ. ಅಂತಲ್ಲಿ ಅವರಿಗೆ ಪೂರಕ ಕೆಲಸ ಮಾಡುತ್ತಿರುವ ಲಯನ್ಸ್, ಲಯನೆಸ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಯತ್ನ ಶ್ಲಾಘನೀಯ. ಪುರಸಭೆಯಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು. ವೇದಿಕೆಯಿಂದ ಲಯನ್ಸ್ ಸಂಯೋಜಕ ವಿಶ್ವನಾಥ ಶೆಟ್ಟಿ ಮಾತನಾಡಿ ವಿಕಲಚೇತನ ಮಕ್ಕಳಿಗೆ ಸಿಗುವಂತಹ ವಿವಿಧ ಸೌಲಭ್ಯಗಳು, ಸರಕಾರದ ಯೋಜನೆಗಳ ಬಗ್ಗೆ ವಿವರ ನೀಡಿದರು.

 ವೇದಿಕೆಯಲ್ಲಿ ಲಯನ್ಸ್ ವಲಯಾಧ್ಯಕ್ಷ ಜಯಂತ ಶೆಟ್ಟಿ, ಸುಮಂಗಲಾ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ನಾರಾಯಣ ಸಪಲ್ಯ,ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಟ್ರಸ್ಟ್ ರಾಜ್ಯ ಅಧ್ಯಕ್ಷೆ ಗೀತಾ ಕರುಣಾಕರ, ಬಂಟ್ವಾಳ ಲಯನ್ಸ್ ಅಧ್ಯಕ್ಷ ಲಕ್ಷ್ಮಣ ಕುಲಾಲ್, ಲಯನೆಸ್ ಅಧ್ಯಕ್ಷೆ ದೇವಿಕಾ ದಾಮೋದರ, ಬಂಟ್ವಾಳ ಲಯನ್ಸ್ ಸ್ಥಾಪಕಾಧ್ಯಕ್ಷ ಡಾ| ವಸಂತ ಬಾಳಿಗ, ಬೆಂಗಳೂರು ಸ್ಕಂದ ಎಜ್ಯಕೇಶನ್ ಟ್ರಸ್ಟ್‍ನ ಡಾ| ಸುಧಾಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇದೇ ಸಂದರ್ಭ ವಿಕಲಚೇತನ ಮಗು ಗ್ರೀಷ್ಮಾಳ ಚಿಕಿತ್ಸೆಗಾಗಿ ಸ್ಥಳದಲ್ಲಿಯೇ ಹಣ ಸಂಗ್ರಹಿಸುವ ಕೆಲಸ ನಡೆಸಲಾಯಿತು. ಸಂಪನ್ಮೂಲ ಕೇಂದ್ರ ಸಮನ್ವಯಾ„ಕಾರಿ ರಾಜೇಶ್ ಸ್ವಾಗತಿಸಿ ಪ್ರಸ್ತಾವನೆ ನೀಡಿದರು. ಬಿಆರ್‍ಪಿ ಗಣೇಶ ವಂದಿಸಿದರು. ಬಿಆರ್‍ಪಿ ನಾರಾಯಣ ಗೌಡ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *