ಕೈಕಂಬ: ಹೊಸ ರಸ್ತೆ-ಮೋರಿಯನ್ನು ನಿರ್ಮಿಸಿ  ಮೂರು ವಾರಗಳು ಕಳೆದಿರಲಿಲ್ಲ. ಆದರೆ ಮೊದಲ ಮಳೆಗೆ ಮೋರಿಗೆ ಕಂಟಕ ಎದುರಾಗಿದೆ. ಇದು ಮಳಲಿ-ಕೈಕಂಬ ಮುಖ್ಯರಸ್ತೆಯಿಂದ ಸೂರಲ್ಪಾಡಿ ಕಡೆ ಸಾಗುವಲ್ಲಿ ಕಂಡುಬಂದ ದೃಶ್ಯ.

mory

ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಮೂರು ವಾರಗಳ ಹಿಂದಷ್ಟೇ ನೂತನ ರಸ್ತೆ ಹಾಗೂ ಮೋರಿ ನಿಮರ್ಾಣ ಕಾಮಗಾರಿ ಪ್ರಾರಂಭವಾಗಿತ್ತು. ಸೂರಲ್ಪಾಡಿಗೆ ತಿರುವು ಪಡೆಯುವ ಕಚ್ಛಾರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ನಾಗರಿಕರು ಸಂತಸಪಟ್ಟಿದ್ದರು. ಆದರೆ ಸುರಿದ ಮೊದಲ ಮಳೆಗೆ ರಸ್ತೆಯ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದಲ್ಲದೆ ಕೆಲವೆಡೆ ಮೋರಿಯ ಸುತ್ತ ಹಾಕಿರುವ ಮಣ್ಣು ಕುಸಿದು ಮೋರಿಗಳಿಗೆ ಕಂಟಕ ಎದುರಾಗಿದೆ.
ರಸ್ತೆ ಕಾಮಗಾರಿ ತೀರಾ ಕಳಪೆ ಗುಣಮಟ್ಟದ್ದಾಗಿದ್ದು, ಅಧಿಕಾರಿಗಳು ಸರಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ರಸ್ತೆಯನ್ನು ಜನರು ಬಳಸುವ ಮುನ್ನವೇ ಅಲ್ಲಲ್ಲಿ ಹಾನಿ ಸಂಭವಿಸಿದೆ ಎಂದು ನಾಗರಿಕರು ದೂರಿದ್ದಾರೆ

By suddi9

Leave a Reply

Your email address will not be published. Required fields are marked *