ಬಂಟ್ವಾಳ: ರಾಷ್ಟ್ರೀಯ ಕಲ್ಪನೆಯನ್ನಿಟ್ಟುಕೊಂಡು ಗ್ರಾಮದ ಅಭಿವೃದ್ದಿ ಕಾರ್ಯಗಳು ನಡೆಯಬೇಕು, ಗ್ರಾಮದ ಸಬಲೀಕರಣವಾಗಬೇಕು, ಪ್ರತೀ ಗ್ರಾಮಕ್ಕೂ ಮೂಲಬೂತ ಸೌಲಭ್ಯ ಸಿಗಬೇಕು, ಆಗ ಮಾತ್ರ ಆರೋಗ್ಯಪೂರ್ಣ ವಾತವರಣವೂ ಗ್ರಾಮಗಳಲ್ಲಿ ಸಿಗಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ತಾಲೂಕಿನ ಬೋಳಂತೂರು ಗ್ರಾಮದ ಬೀರಕೋಡಿಯಿಂದ ಕೇಶವನಗರದವರಗೆ ತನ್ನ ಪ್ರದೇಶಾಭಿವೃದ್ದಿ ನಿಧಿಯಡಿ ಮಂಜೂರಾದ 7 ಲಕ್ಷ ರುಪಾಯಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಳ್ಳೆಯ ರಸ್ತೆಗಳು ಇದ್ದಾಗ ಗ್ರಾಮದ ಇತರ ಮೂಲಭೂತ ಸೌಲಭ್ಯಗಳು ಅಭಿವೃದ್ದಿಯಾಗಲು ಸಾದ್ಯವಿದೆ. ತನಗಿರುವ ಸೀಮಿತ ಅನುದಾನದಲ್ಲಿ ತನ್ನ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿಗಾಗಿ ಅನುದಾನ ಒದಗಿಸಿದ ತೃಪ್ತಿ ಇದೆ ಎಂದರು.

BTW_AUG6_3
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ ತಾನು ಶಾಸಕನಾಗಿದ್ದ ಸಂದರ್ಭದಲ್ಲಿ ಈ ಭಾಗದ ರಸ್ತೆಗಳ ಅಭಿವೃದ್ದಿಗೆ ಪ್ರಯತ್ನ ಪಟ್ಟಿದ್ದೇನೆ. ಅದರ್ಲಲೂ ಗ್ರಾಮೀಣ ಭಾಗಗಳಲ್ಲಿನ ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದೇನೆ ಎಂದರು. ವೇದಿಕೆಯಲ್ಲಿ ರಸ್ತೆ ಅಭಿವೃದ್ದಿಗೆ ಮುತುವರ್ಜಿ ವಹಿಸಿದ್ದ ಸ್ಥಳೀಯ ಪ್ರಮುಖರಾದ ಸುಧಾಕರ ರೈ, ಬಿಜೆಪಿ ಎಸ್‍ಸಿ ಮೋರ್ಛಾದ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಜಿ.ಪಂ.ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್ ಗೋಳ್ತಮಜಲು ಗ್ರಾ.ಪಂ.ಸದಸ್ಯ ಜಯಂತ ವೇದಿಕೆಯಲ್ಲಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ನೇಮಿರಾಜರೈ ಸ್ವಾಗತಿಸಿ, ಬೋಳಮತೂರು ಗ್ರಾ,ಪಂ.ಸದಸ್ಯ ನಾರಾಯಣ ಪೂಜಾರಿ ವಂದಿಸಿದರು.

By Suddi9

Leave a Reply

Your email address will not be published. Required fields are marked *