ಉಳ್ಳಾಲ: “ಇತಿಹಾಸ ಕಟ್ಟುವ ಪ್ರಕ್ರಿಯೆಯಲ್ಲಾ ಹಿಂದೆ ದೊರೆತಿರುವ ಕಲ್ಲಿನ ಶಾಸನಗಳು, ಕಥನಗಳೇ ಇತಿಹಾಸದ ಪ್ರತಿಧ್ವನಿಗಳು” ಎಂದು ವಾಮನಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ವಸಂತ ಕುಮಾರ್ .ಎಚ್ ಅಭಿಪ್ರಾಯಪಟ್ಟರು. ಅವರು ಏಮ್ಸ್ ಪ್ರಥಮ ದರ್ಜೆ ಕಾಲೇಜು ಇದರ ಇತಿಹಾಸ ಸಂಘದ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲಿ “ತುಳುನಾಡಿನ ಇತಿಹಾಸ ಕಥನ” ಎಂಬ ವಿಷಯದ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅದ್ಯಕ್ಶತೆಯನ್ನು ಪ್ರಾಂಶುಪಾಲರಾದ ಕು. ಸಮೀರಾ ಕೆ. ಎ. ವಹಿಸಿದ್ದರು. ವೇದಿಕೆಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥೆ ನಳಿನಾಕ್ಷಿ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಸಂಘದ ಮುಖ್ಯಸ್ಥ ಇಕ್ಬಾಲ್ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕಿ ನಳಿನಾಕ್ಷಿ ಸ್ವಾಗತಿಸಿ, ಪದ್ಮಾವತಿ ದ್ವಿತೀಯ ಬಿ ಎ ವಂದಿಸಿದರು. ಕಾವ್ಯಶ್ರೀ ತೃತೀಯ ಬಿ.ಎ ಕಾರ್ಯಕ್ರಮ ನಿರೂಪಿಸಿದರು.
