ಮೂಡುಬಿದಿರೆ: ಅಲಂಗಾರಿನಲ್ಲಿ ನಡೆದ ಐಸಿವೈಎಮ್ ಯುವರಂಗ್-2016 ಸಮಾವೇಶಕ್ಕೆ ವಲಯ ನಿರ್ದೇಶಕ ರೆ.ಫಾ ಬಾಜಿಲ್ ವಾಸ್ ಅವರು ನೀರಿಗೆ ರಂಗು ಸೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮೂಡುಬಿದಿರೆ ವಲಯ ಭಾರತೀಯ ಕಥೋಲಿಕ್ ಯುವ ಸಂಚಲನ ಮತ್ತು ಐಸಿವೈಎಮ್ ಅಲಂಗಾರು ಘಟಕದ ವತಿಯಿಂದ ಅಲಂಗಾರು ಹೋಲಿ ರೋಸರಿ ಚರ್ಚ್ ಸಭಾಂಗಣದಲ್ಲಿ ಯುವರಂಗ್-2016 ಯುವ ಸಮಾವೇಶ ನಡೆಯಿತು.

ಮೂಡುಬಿದಿರೆ ವಲಯ ಪ್ರದಾನ ಧರ್ಮಗುರು ರೆ.ಫಾ ಪಾವ್ಲ್ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು.ಕೇಂದ್ರೀಯ ಐಸಿವೈಎಮ್ ಅಧ್ಯಕ್ಷರಾಗಿ ಆಯ್ಕೆಯಾದ ಜ್ಯಾಕ್ಸನ್ ಎರಿಕ್ ಡಿಕೋಸ್ತಾ ವಾಮದಪದವು, ಲೆಕ್ಕಪರಿಶೋಧಕರಾಗಿ ಆಯ್ಕೆಯಾದ ಅನೀಶ್ ಡಿಸೋಜಾ ಅಲಂಗಾರು, ಮೂಡುಬಿದಿರೆ ಪುರಸಭಾ ಸದಸ್ಯರಾಗಿ ಆಯ್ಕೆಯಾದ ಮಾಜಿ ಐಸಿವೈಎಮ್ ವಲಯಾಧ್ಯಕ್ಷ ವಿನೋದ್ ರೋಶನ್ ಸೆರಾವೊ, ದಕ್ಷಿಣ ಕನ್ನಡ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಐಸಿವೈಎಮ್ ವಲಯ ಕಾರ್ಯದರ್ಶಿ ಜೋಯ್ಲಸ್ ಡಿ’ಸೋಜಾ ತಾಕೊಡೆ, ಎಂಟೆಕ್ನಲ್ಲಿ ಬೆಳ್ಳಿ ಪದಕ ಪಡೆದ ಚಿಂತನ್ ಲೋಬೊ ಶಿರ್ತಾಡಿ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಪ್ರಾಂತೀಯ ಯುವಜನ ನಿಯೋಗದ ಸ್ತ್ರೀ ಸಚೇತಕಿ ಸಿ.ಐರಿನ್ ತಾವ್ರೊ, ಕೇಂದ್ರಿಯ ಪ್ರತಿನಿಧಿ ಅನೀಶ್ ಡಿಸೋಜಾ ಸುರತ್ಕಲ್, ಅಲಂಗಾರು ಐಸಿವೈಎಮ್ ಸಚೇತಕ ಐವನ್ ಪಿಂಟೊ, ಅಲಂಗಾರು ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಸಂತೋಶ್ ರೊಡ್ರಿಗಸ್, ಅಲಂಗಾರು ಐಸಿವೈಎಮ್ ಅಧ್ಯಕ್ಷ ಆದಿತ್ ಥೋಮಸ್, ವಲಯ ಕಾರ್ಯದರ್ಶಿ ಫ್ರಾನ್ಸಿಸ್ ಮೊಂತೇರೊ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮನಶಾಸ್ತ್ರಜ್ಞ ರೆ.ಫಾ ಅರುಣ್ ಲೋಬೊ ಯುವಜನರ ಸಾಮಾಜಿಕ ಹಾಗೂ ಮಾನಸಿಕ ಬೆಳವಣಿಗೆ ಬಗ್ಗೆ, ಕೌಟುಂಬಿಕ ಜೀವನ ಕೇಂದ್ರದ ನಿರ್ದೇಶಕ ರೆ.ಫಾ ಅನಿಲ್ ಆಲ್ಫ್ರೆಡ್ ಡಿಸೋಜಾ ಕೌಟುಂಬಿಕ ಜೀವನದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜೋಯೆಲ್ ಕೊನ್ಸೆಸ್ಸೊ ಮಿಲಾಗ್ರಿಸ್ ಅವರ ನೇತೃತ್ವದಲ್ಲಿ ಮನೋರಂಜನಾ ಚಟುವಟಿಕೆಗಳನ್ನು ನಡೆಸಲಾಯಿತು.
ಐಸಿವೈಎಮ್ ವಲಯಾಧ್ಯಕ್ಷ ಜೈಸನ್ ಪಿರೇರಾ ಶಿರ್ತಾಡಿ ಸ್ವಾಗತಿಸಿದರು. ಅಲಂಗಾರು ಐಸಿವೈಎಮ್ ಕಾರ್ಯದರ್ಶಿ ಜೇವಿನ್ಸ್ ಪಾಯ್ಸ್ ವಂದಿಸಿದರು. ಅನಿತಾ ವಾಲ್ಡರ್ ವಾಮದಪದವು ಕಾರ್ಯಕ್ರಮ ನಿರೂಪಿಸಿದರು.
