ಬಂಟ್ವಾಳ: ತಾಯಿಯ ಎದೆ ಹಾಲು ಮಗುವಿಗೆ ಮಾನಸಿಕ, ದೈಹಿಕ ಬೆಳವಣಿಗೆಯ ಜೊತೆಯಲ್ಲಿ ಉತ್ತಮ ಆರೋಗ್ಯವನ್ನು ನೀಡುತ್ತದೆ, ತಾಯಿಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಎಂದು ಗೋಳ್ತಮಜಲು ಗ್ರಾ.ಪಂ, ಅದ್ಯಕ್ಷೆ ಜಯಲಕ್ಮೀ ಭಟ್ ಹೇಳಿದರು . ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಗೋಳ್ತಮಜಲು ಗ್ರಾ.ಪಂ. ಮತ್ತು ಗೋಳ್ತಮಜಲು, ಅಮ್ಟೂರು ಸ್ರ್ತೀ ಶಕ್ತಿ ಗೊಂಚಲು ಅಂಗನವಾಡಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಗೋಳ್ತಮಜಲು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.1 (5)

2 (3)

ತಾಯಿಯ ಸೌಂಧರ್ಯಕ್ಕೆ ಧಕ್ಕೆಯಾಗುತ್ತದೆ ಎನ್ನುವ ದೃಷ್ಟಿಯಿಂದ ಮಗುವಿಗೆ ಎದೆ ಹಾಲನ್ನು ಕೊಡದೆ ಮಗುವಿನ ಭವ್ಯ ಭವಿಷ್ಯವನ್ನು ಹಾಳು ಮಾಡಬೇಡಿ. ಮಗುವಿಗೆ ತಾಯಿಯ ಎದೆ ಹಾಲು ಪರಿಪೂರ್ಣ ಆಹಾರ , ಸಂಪೂರ್ಣ ಮತ್ತು ಸುರಕ್ಷಿತ ಆಹಾರ ಹಾಗಾಗಿ ಮಗುವಿನ ಲಾಲನೆ ಪಾಲನೆಯ ಮಹತ್ತರ ಜವಬ್ದಾರಿಯಲ್ಲಿ ಇದು ಪ್ರಾಮುಖ್ಯ ಅಂಶವಾಗಿದೆ ಎಂದರು. ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವಿಶ್ವೇಶ್ವರ ಎಂ.ಕೆ. ಸ್ತನ್ಯ ಪಾನದ ಬಗ್ಗೆ ಮಾಹಿತಿ ನೀಡಿದರು. ಮ್ಕಕಳ ಕಲ್ಯಾಣ ಸಮಿತಿಯ ಸದಸ್ಯ ಉಮೇಶ್ ನಿರ್ಮಲ್ ಬಾಲಕಾರ್ಮಿಕ ಮತ್ತು ಮಕ್ಕಳ ಮಾರಾಟ ಸಾಗಾಟ ದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯರಾದ ಶೇಖರ ಕೊಟ್ಟಾರಿ, ಗುರುವಪ್ಪ ಗೌಡ, ರಾಜೇಶ್ ಕೊಟ್ಟಾರಿ, ಜಯಂತ ಗೌಡ, ಲತಾ, ಪೂರ್ಣಿಮಾ ರಾವ್,ಗಿರೀಶ್, ಜಯಶ್ರೀ, ಲಲಿತ, ಆಯಿಷಾ, ಲಖಿತಾ ಆರ್. ಶೆಟ್ಟಿ , ಮೇಲ್ವಿಚಾರಕಿ ಶಾಲಿನಿ ಮತ್ತು ಆರೋಗ್ಯ ಮಿತ್ರ ಉಷಾ ಉಪಸ್ಥಿತರಿದ್ದರು. ಅರುಣಾರಾವ್ ಸ್ವಾಗತಿಸಿ, ಯಮುನ ವಂದಿಸಿದರು. ಸರ್ವಾಣಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *