ಮೂಡುಬಿದಿರೆ: ಕಡಂದಲೆಯ ಗೋಲಿದಡಿ ಎಂಬಲ್ಲಿ ವಿದ್ಯುತ್ ಪರಿವರ್ತಕಕ್ಕೆ ಕಾರು ಡಿಕ್ಕಿಯಾದ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾರನ್ನು ವಶಕ್ಕೆ ಪಡೆದು ಪೋಲಿಸರು ಆರೋಪಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಜುಲೈ 31ರಂದು ಗೋಲಿದಡಿ ಸಮೀಪ ಸುರತ್ಕಲ್ ನಿವಾಸಿಯಾಗಿರುವ ಬಾಲಕೃಷ್ಣ ಎನ್ನುವವರು ವಿರುದ್ದ ದಿಕ್ಕಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಚರಂಡಿಯ ಮೂಲಕ ಹಾದು ವಿದ್ಯುತ್ ಪರಿವರ್ತಕಕ್ಕೆ ಕಾರು ಡಿಕ್ಕಿಯಾಗಿತ್ತು. ಕಾರಿನ ವೇಗಕ್ಕೆ ಪರಿವರ್ತಕ ಸಂಪೂರ್ಣ ನುಜ್ಜು ಗುಜ್ಜಾಗಿ ದಾರಾಶಾಯಿಯಾಗಿತ್ತು. ಈ ಸಂದರ್ಭ ಬಾಲಕೃಷ್ಣರವರು ಮೆಸ್ಕಾಂ ಅಧಿಕಾರಿ ಬಳಿ ಇಲಾಖೆಗಾದ ನಷ್ಟವನ್ನು ಭರಿಸುವುದಾಗಿ ಒಪ್ಪಿಕೊಂಡಿದ್ದರೆನ್ನಲಾಗಿದ್ದು, ಆ ಬಳಿಕ ಸಂಪೂರ್ಣ ಖರ್ಚು ನೀಡಲು ನಿರಾಕರಿಸಿದ್ದು, ಈ ಪರಿವರ್ತಕ ಬೆಳ್ಮಣ್ ವ್ಯಾಪ್ತಿಗೆ ಬರುವುದರಿಂದ ಬೆಳ್ಮಣ್ ಶಾಖಾಧಿಕಾರಿ ಪ್ರದೀಪ್ ಕುಮಾರ್ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *