ಬಂಟ್ವಾಳ : ತಾಲೂಕಿನ ಮಯ್ಯರಬೈಲು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ಕುಲಾಲ ಸೇವಾದಳದ ವತಿಯಿಂದ ಆಗಸ್ಟ್ 28ರಂದು ಕುಲಾಲ ಸಂಘಟನೆಗಾಗಿ `ಜೊತೆ ಜೊತೆಯಲಿ’ ಎಂಬ ಆಕರ್ಷಕ ಹೆಸರಿನಲ್ಲಿ ಕುಲಾಲ ಕುಟುಂಬಗಳ ಸಮ್ಮಿಲನ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕುಲಾಲ ಸಮುದಾಯದ ಪ್ರಬುದ್ಧ ಯಕ್ಷಗಾನ, ನಾಟಕ ಕಲಾವಿದರ ಕೂಡುವಿಕೆಯೊಂದಿಗೆ ವಯೋವೃದ್ಧರಿಂದ ಹಿಡಿದು ನವ ಯುವಕ, ಯುವತಿಯರು ಮೋಜು, ಮಸ್ತಿಯೊಂದಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿ.ಸಿ.ರೋಡಿನ ಪೊಸಳ್ಳಿಯಲ್ಲಿರುವ ನೂತನ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿರುವ ಎಲ್ಲಾ ಕಾರ್ಯಕ್ರಮಕ್ಕೂ ಪ್ರಸಿದ್ಧ ಸಿನಿಮಾಗಳ ಹೆಸರನ್ನಿಟ್ಟು ಸ್ಪರ್ಧೆಯನ್ನು ಆಕರ್ಷಕಗೊಳಿಸಲಾಗಿದೆ. ಯುವ ಪ್ರತಿಭೆಗಳಿಂದ ಯಕ್ಷ ವೈಭವ, ಡ್ಯಾನ್ಸ್ ಧಮಾಕಾ, ಭರತನಾಟ್ಯ ವೈಭವ, ಸಂಗೀತ ಧಾರೆ, ನೃತ್ಯ ವೈಭವವು ನಡೆಯಲಿದೆ ಎಂದು ಕುಲಾಲ ಸೇವಾದಳದ ದಳಪತಿ ಯಾದವ ಅಗ್ರಬೈಲು ಮತ್ತು ಕಾರ್ಯದರ್ಶಿ ಸದಾನಂದ ಮೊಡಂಕಾಪು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
