ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಊರವರ ಮತ್ತು ಶಿಕ್ಷಕರ ಇಚ್ಛಾ ಶಕ್ತಿಯಿಂದ ಸರಕಾರಿ ಶಾಲೆಯೊಂದು ಖಾಸಗಿ ಶಾಲೆಗಿಂತ ಮಿಗಿಲಾಗಿ ಉನ್ನತಿಗೇರುವಲ್ಲಿ ನಡುಮೊಗರು ಶಾಲೆ ಮಾದರಿಯಾಗಿದೆ.ಬಲಿಷ್ಠ ರಾಷ್ಟ್ರದ ಚಿಂತನೆಯಲ್ಲಿ ಉತ್ತಮ ಶಿಕ್ಷಣ ನೀಡಲು ಸರಕಾರ ಬದ್ಧವಾಗಿದ್ದು ಸವಲತ್ತುಗಳನ್ನು ವಿದ್ಯಾಥರ್ಿಗಳು, ಪೋಷಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಂಟ್ವಾಳ ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ಕುಮಾರ್ ಶೆಟ್ಟಿ ಅವರು ಹೇಳಿದರು.
ಅವರು ಮಂಗಳವಾರ ಬಂಟ್ವಾಳ ತಾಲೂಕಿನ ನಡುಮೊಗರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಉಚಿತ ಸಮವಸ್ತ್ರ ಮತ್ತು ಲೇಖನ ಸಾಮಾಗ್ರಿ ವಿತರಣೆ, ವನಮಹೋತ್ಸವ ಮತ್ತು ಯಕ್ಷಗಾನ ತರಗತಿ ಪ್ರಾರಂಭದ ವಿದ್ಯಾಪೋಷಣಾ-ವೃಕ್ಷಾರೋಪಣಾ-ಯಕ್ಷೋಪಾಸನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

vanamahothsva-1

yakshopasana
ಶಾಲಾ ಹಳೆ ವಿದ್ಯಾಥರ್ಿ ಸೇವಾಸಮಿತಿ ಅಧ್ಯಕ್ಷ ಕೆ.ಎನ್.ಶಿವರಾಮ ಶೆಟ್ಟಿ ನಡುಮೊಗರುಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾಥರ್ಿಗಳ ಕೊರತೆಯಿಂದ ಮುಚ್ಚಿಹೋಗುವ ಸ್ಥಿತಿಯಲ್ಲಿದ್ದ ಶಾಲೆಯನ್ನು ಊರ-ಪರವೂರ, ಸೇವಾ ಸಂಸ್ಥೆಗಳ ಸಹಕಾರದಿಂದ ಮತ್ತೆ ಮುನ್ನಡೆಯುವಂತೆ ಮಾಡಿದ್ದು ಸಂತಸ ತಂದಿದೆ. ಇಲ್ಲಿನ ಮಕ್ಕಳಿಗೆ ಉಚಿತವಾಗಿ ಎಲ್ಲಾ ಸೌಲಭ್ಯಗಳನ್ನು ನೀಡಿ ಗುಣಾತ್ಮಕ ಶಿಕ್ಷಣ ನೀಡುವಕಡೆಗೆ ದಿಟ್ಟ ಹೆಜ್ಜೆಯನ್ನು ಇಡುತ್ತಿದೆ ಎಂದು ಹೇಳಿದಿರು. ಪಜೀರು ಶ್ರೀ ವೈದ್ಯನಾಥ ದೇವಸ್ಥಾನದ ಅಧ್ಯಕ್ಷ ರಮೇಶ ಅಡಪ ಡೆಚ್ಚಾರು ಅವರು 1ನೇ ಕ್ಲಾಸಿನ ವಿದ್ಯಾಥರ್ಿಗಳಿಗೆ ಆರತಿ ಬೆಳಗಿ ಶುಭ ಹಾರೈಸಿದರು.ಉಪ್ಪಿನಂಗಡಿ ದಂತ ವೈದ್ಯ ಡಾ|ರಾಜಾರಾಮ್ ಕೆ.ಬಿ., ಸರಪಾಡಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಆದಂಕುಂಞಿ, ಯಕ್ಷಗಾನ ಶಿಕ್ಷಕ ಯೋಗೀಶ್ ಕೆ.ಎಸ್.ಅಳದಂಗಡಿ, ಮಣಿನಾಲ್ಕೂರು ಸೇ.ಸ.ಬ್ಯಾಂಕ್ ನಿವೃತ್ತ ಪ್ರಬಂಧಕ ಬಿ.ನಾರಾಯಣ ರೈ , ನಡುಮೊಗರು ಯುವಕಮಂಡಲ ಅಧ್ಯಕ್ಷ ವೇಣುಗೋಪಾಲ ಮುಂಡ್ರೇಲ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಗೌಡ, ಶಿಕ್ಷಕ ವೃಂದ, ಅಂಗನವಾಡಿ ಕಾರ್ಯಕತರ್ೆ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಹಳೆ ವಿದ್ಯಾಥರ್ಿ ಸೇವಾ ಸಮಿತಿ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾಥರ್ಿಗಳಲ್ಲಿ ಸಸ್ಯ ಸಂರಕ್ಷಣೆ ಹಾಗೂ ಪರಿಸರ ಕಾಳಜಿ ಬೆಳೆಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ವೃಕ್ಷಾರೋಪಣಾ ಕಾರ್ಯಕ್ರಮದನ್ವಯ ಶಾಲಾ ವಠಾರದಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು. ಭಾರತೀಯ ಸಂಸ್ಕೃತಿ,ಕಲೆ ಮತ್ತು ಯಕ್ಷಗಾನ ಕಲೆಯನ್ನು ಬೆಳೆಸುವ ಉದ್ದೇಶದಲ್ಲಿ ವಿದ್ಯಾಥರ್ಿಗಳಿಗೆ ಉಚಿತ ಯಕ್ಷಗಾನ ತರಬೇತಿ ತರಗತಿಯನ್ನು ಯಕ್ಷಗುರು ಯೋಗೀಶ್ ಆಚಾರ್ಯ ಅಳದಂಗಡಿ ಅವರು ವೀಳ್ಯ ಪಡೆಯುವ ಮೂಲಕ ಉದ್ಘಾಟಿಸಿದರು. ಎಲ್ಲಾ ವಿದ್ಯಾಥರ್ಿಗಳಿಗೆ ಸಿದ್ಧಪಡಿಸಿದ ಸಮವಸ್ತ್ರ ಹಾಗೂ ಲೇಖನ ಪುಸ್ತಕಗಳನ್ನು ವಿತರಿಸಲಾಯಿತು. ನೂತನವಾಗಿ ಸೇರ್ಪಡೆಗೊಂಡ 1ನೇ ತರಗತಿಯ 21 ವಿದ್ಯಾಥರ್ಿಗಳಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು.
ವಿದ್ಯಾಪೋಷಣಾ-ವೃಕ್ಷಾರೋಪಣಾ-ಯಕ್ಷೋಪಾಸನಾ ಕಾರ್ಯಕ್ರಮವನ್ನು ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ಕುಮಾರ್ ಶೆಟ್ಟಿ ಅವರು ಉದ್ಘಾಟಿಸಿದರು.  ಬಂಟ್ವಾಳ ತಾಲೂಕು ನಡುಮೊಗರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ವನಮಹೋತ್ಸವ ವೃಕ್ಷಾರೋಪಣಾ ಕಾರ್ಯಕ್ರಮ ಜರಗಿತು. ಬಂಟ್ವಾಳ ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ಕುಮಾರ್ ಶೆಟ್ಟಿ , ಶಾಲಾ ಹಳೆ ವಿದ್ಯಾಥರ್ಿ ಸೇವಾಸಮಿತಿ ಅಧ್ಯಕ್ಷ ಕೆ.ಎನ್.ಶಿವರಾಮ ಶೆಟ್ಟಿ ನಡುಮೊಗರುಗುತ್ತು , ಪಜೀರು ಶ್ರೀ ವೈದ್ಯನಾಥ ದೇವಸ್ಥಾನದ ಅಧ್ಯಕ್ಷ ರಮೇಶ ಅಡಪ ಡೆಚ್ಚಾರು, ಮುಖ್ಯ ಶಿಕ್ಷಕ ಚಂದ್ರ ಕೆ. ಮತ್ತಿತರರು ಉಪಸ್ಥಿತರಿದ್ದರು.  ಮುಖ್ಯ ಶಿಕ್ಷಕ ಚಂದ್ರ ಕೆ. ಸ್ವಾಗತಿಸಿದರು. ಶಿಕ್ಷಕ ಮಧುಸೂದನ ಪ್ರಸ್ತಾವಿಸಿದರು. ಶಿಕ್ಷಕಿ ಸವಿತ ಕಾರ್ಯಕ್ರಮ ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *