ಉಡುಪಿ: ತಾಲೂಕಿನ ಪಾಂಡೇಶ್ವರ ಗ್ರಾಮದ ನಿವಾಸಿಗಳಾದ ವಾಸು ಮತ್ತು ಪ್ರಭಾವತಿ ದಂಪತಿ ಇಬ್ಬರು ಪ್ರತಿಭಾವಂತ ಹೆಣ್ಣು ಮಕ್ಕಳನ್ನು ಹೊಂದಿದ್ದು ತೀವ್ರವಾದ ಬಡತನ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು.ಇವರ ಈ ಸಮಸ್ಯೆಯನ್ನು ಮಸ್ಕತ್ ನ ಬಿಲ್ಲವ ಸಂಘದ ಮುಂದಿಟ್ಟಾಗ ಸಮಸ್ಯೆಗೆ ಕೂಡಲೇ ಸ್ವಂದಿಸಿದ ಸಂಘದ ಹಿರಿಯ ಸಂಘಟಕರಾದ ಕುಶಾಲ್ ಬಂಗೇರ ರವರು ತಮ್ಮ ಉದಾರ ಮನಸ್ಸಿನಿಂದ 5 ಸಾವಿರ ರೂಪಾಯಿಯ ನಗದನ್ನು ನೀಡಿದರು.

ಈ ಹಣವನ್ನು ಪಾಂಡೇಶ್ವರ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಮಂಜುನಾಥರವರ ಮೂಲಕ ಆ ಬಡ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.ಈ ಸಂಧರ್ಭದಲ್ಲಿ ಯುವ ವೇದಿಕೆಯ ಕಾರ್ಯದರ್ಶಿ ಸುರೇಶ ಪೂಜಾರಿ ಹಾಗೂ ಸದಸ್ಯ ಸುದರ್ಶನ ಪೂಜಾರಿ ಉಪಸ್ಥಿತರಿದ್ದರು. ಹಣವನ್ನು ಪಡೆದ ಕುಟುಂಬವು ದಾನಿಗಳಿಗೆ ತುಂಬು ಹ್ರದಯದ ಕ್ರತಜ್ಞತೆ ತಿಳಿಸಿದರು.
