ಮೂಡುಬಿದಿರೆ: ವಿದ್ಯುತ್ ಪರಿವರ್ತಕಕ್ಕೆ ವೇಗಭರಿತ ಕಾರೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಪರಿವರ್ತಕ ಮತ್ತು ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರು ಬಾರೀ ಅನಾವುತದಿಂದ ಪರಾಗಿದ್ದಾರೆ.
ಮೂಡುಬಿದಿರೆ ಸಮೀಪದ ಕಡಂದಲೆ ಬಳಿಯ ಗೋಳಿದಡಿ ಎಂಬಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ. ಸಚ್ಚೇರಿಪೇಟೆ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಐ10 ಕಾರೊಂದು ಅತೀ ವೇಗವಾಗಿ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಚರಂಡಿಯ ಮೂಲಕ ಹಾದು ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಟ್ರಾನ್ಸ್‍ಪಾರಂ ಸಂಪೂರ್ಣ ದರಾಶಾಯಿಯಾಗಿದ್ದು, ಕಾರು ಕೂಡ ಜಖಂಗೊಂಡಿದೆ. ಕಾರಿನಲ್ಲಿ ಚಾಲಕ ಸಹಿತ ನಾಲ್ವರು ಪ್ರಯಾಣಿಸುತ್ತಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳಕ್ಕೆ ಮೆಸ್ಕಾಂನ ಬೆಳ್ಮಣ್ ವಿಭಾಗದ ಶಾಖಾಧಿಕಾರಿ ಪ್ರದೀಪ್ ಕುಮಾರ್, ದಕ ಜಿಲ್ಲಾ ಪಂಚಾಯಿತಿ ಸದಸ್ಯ ಸುಚರಿತ ಶೆಟ್ಟಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
mbd_july31_4 (1)

mbd_july31_4 (4)

mbd_july31_4 (5)

mbd_july31_4 (1)

mbd_july31_4 (4)
ನೆರವಾದ ಮೆಸ್ಕಾಂ ಮಾಜಿ ಉದ್ಯೋಗಿ:
ಈ ಹಿಂದೆ ಮೆಸ್ಕಾಂನಲ್ಲಿ ಗುತ್ತಿಗೆ ಆದಾರದಲ್ಲಿ ದುಡಿಯುತ್ತಿದ್ದ ಸಿಬ್ಬಂದಿ ಗುಣಪಾಲ್ ತಕ್ಷಣ ಘಟನಾ ಸ್ಥಳಕ್ಕೆ ದಾವಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಇವರಿಗೆ ಮೆಸ್ಕಾಂ ಉದ್ಯೋಗವನ್ನು ಖಾಯಂ ಮಾಡದಿದ್ದರೂ ಇವರು ಅಪಾಯವನ್ನು ತಪ್ಪಿಸಿದ್ದು, ಇದನ್ನು ನೆರೆದಿದ್ದ ಜನ ಶ್ಲಾಘಿಸಿದ್ದಾರೆ. ಇನ್ನೋರ್ವ ಸಿಬ್ಬಂದಿ ಪ್ರವೀಣ್ ಡಿಸೋಜಾ ರಸ್ತೆಗೆ ಬಿದ್ದ ಟ್ರಾನ್ಸ್‍ಪಾರಂ ತೆರವುಗೊಳಿಸಿ ಸುಗಮ ಸಂಚಾರಕ್ಕೆ ನೆರವಾದರು.

By suddi9

Leave a Reply

Your email address will not be published. Required fields are marked *