ವಿಟ್ಲ: ಜೆಸಿಐ ವಿಟ್ಲ ಮತ್ತು ರೋಟರಿ ಕ್ಲಬ್ ವಿಟ್ಲ ಇದರ ವತಿಯಿಂದ `ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ವಿಟ್ಲದ ವಿಠಲ ಪ್ರೌಢ ಶಾಲೆಯ ಸಭಾ ಭವನದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಚೆನ್ನೆ ಮಣೆಯಾಟ ಆಡುವ ಮೂಲಕ ಉದ್ಘಾಟಿಸಿದ ಮಂಗಳೂರಿನ ಆರೋಗ್ಯ ಇಲಾಖೆಯ ಅಧಿಕಾರಿ ಜಯರಾಮ ಪೂಜಾರಿ ಆಟಿ ತಿಂಗಳಲ್ಲಿ ಉಪಯೋಗಿಸುವ ವಿಶೇಷ ತಿಂಡಿ ತಿನಿಸುಗಳ ಔಷದೀಯ ಗುಣಗಳು ಮತ್ತು ನಮ್ಮ ಹಿರಿಯರ ಆಚರಣೆಗಳ ಬಗ್ಗೆ ನಮ್ಮ ಮಕ್ಕಳಿಗೆ ನಾವು ತಿಳಿಸಬೇಕು ಎಂದರು. ಈ ಸಂದರ್ಭದಲ್ಲಿ ವಿಟ್ಲ ಪುಷ್ಪಾ ಕ್ಲಿನಿಕ್ ನ ವೈದ ಡಾ| ವಿ ಕೆ ಹೆಗ್ಡೆ ಯವರಿಂದ ತುಳು ಸಂಸ್ಕೃತಿಯ ಭೂತಾರಾಧನೆ ಬಗ್ಗೆ ಕಿರು ಚಲನ ಚಿತ್ರವನ್ನು ಪ್ರದರ್ಶಿಸಲಾಯಿತು.j r (1)

j r (2)

ಜೇಸಿಐ ಮತ್ತು ರೋಟರಿ ಕ್ಲಬ್ ನ ನಿಕಟ ಪೂರ್ವಾಧ್ಯಕ್ಷ ರುಗಳಾದ ಮೋಹನ ಮೈರ ಮತ್ತು ಡಿ ಬಿ ಅಬೂಬಕ್ಕರ್ ವೇದಿಕೆಯಲ್ಲಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ ಸ್ವಾಗತಿಸಿದರು. ಜೆಸಿಐ ಅಧ್ಯಕ್ಷ ಬಾಬು ಕೊಪ್ಪಳ ಪ್ರಸ್ತಾವಿಸಿದರು. ರೋಟರಿ ಕಾರ್ಯದರ್ಶಿ ಕಿರಣ್ ಕುಮಾರ್ ಬ್ರಹ್ಮಾವರ್ ವಂದಿಸಿದರು. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು. ಜೆಸಿಐ ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಡಾ| ಮನೋರಮಾ ಜಿ ಭಟ್ ಮತ್ತು ಅನೂಷಾ ಸಹಕರಿಸಿದರು.

By suddi9

Leave a Reply

Your email address will not be published. Required fields are marked *